ಬೆಂಗಳೂರು: ಸರ್ಕಾರದ ದಿವ್ಯ ನಿರ್ಲಕ್ಷ್ಯ, ಅಧಿಕಾರಿಗಳ ಲಂಚಗುಳಿತನದಿಂದಾಗಿ ಕಂಗೆಟ್ಟಿರುವ ಕರ್ನಾಟಕದ ಕೈಮಗ್ಗ ನೇಕಾರರು, ಸರ್ಕಾರ ಅನುದಾನದ ರೂಪದಲ್ಲಿ ತಮಗೆ ನೀಡಿದ್ದ ರೂ.33 ಲಕ್ಷಗಳನ್ನು ಸರ್ಕಾರಕ್ಕೆ ವಾಪಾಸ್ ನೀಡಲು ಮುಂದಾಗಿದ್ದಾರೆ. ಹೋರಾಟದ ಫಲವಾಗಿ ಸತತ 7 ವರ್ಷಗಳ ಕಾಯುವಿಕೆಯ ಫಲವಾಗಿ ಈ ಅನುದಾನವನ್ನು ಅವರಿಗೆ ನೀಡಲಾಗಿತ್ತು.
ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರಿ ಸಂಘವಾದ ಚರಕ ಮತ್ತು ದೇಸಿ ಎಂಬ NGO ಶಿವಮೊಗ್ಗ ಜಿಲ್ಲೆಯ ಹೆಗ್ಗೋಡಿನಲ್ಲಿ ನೈಸರ್ಗಿಕ ಬಣ್ಣಗಳ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸಲು ಬಯಸಿತ್ತು ಮತ್ತು 2012 ರಲ್ಲಿ ಸರ್ಕಾರವು ಸಾಂಪ್ರದಾಯಿಕವಾಗಿ ಕೈಯಿಂದ ಮಾಡಿದ ಉತ್ಪನ್ನಗಳನ್ನು ಉತ್ತೇಜಿಸಲು ಈ ಯೋಜನೆಯಲ್ಲಿ ಭಾಗಿಯಾಗುವುದಾಗಿ ಘೋಷಿಸಿತ್ತು.
ಸಂಸ್ಥೆ ನಿರ್ಮಾಣಕ್ಕೆ ಭೂಮಿ ಹಂಚಿಕೆ ಮಾಡಲು ಸರ್ಕಾರ ಎರಡು ವರ್ಷಗಳನ್ನು ತೆಗೆದುಕೊಂಡಿತು ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಯಾವುದೇ ಆಕ್ಷೇಪಣೆ ಇಲ್ಲ ಎಂಬ ಪ್ರಮಾಣಪತ್ರವನ್ನು ಪಡೆದುಕೊಳ್ಳಲು ಮೂರು ವರ್ಷಗಳು ತಗುಲಿತು, ಶಿವಮೊಗ್ಗ ಜಿಲ್ಲಾ ಪಂಚಾಯತ್ನಿಂದ NoC ಪಡೆಯಲು ಎರಡು ವರ್ಷಗಳು ಬೇಕಾಯಿತು.
ಪ್ರಸ್ತುತ ಹಣವು ಷರತ್ತುಗಳ ಜಂಟಿ ಖಾತೆಯಲ್ಲಿದೆ. ಅದಕ್ಕಾಗಿಯೇ ದೇಸಿ NGO ಸಂಸ್ಥಾಪಕ ಪ್ರಸನ್ನ ಅವರು ಜೂನ್ 6 ರಂದು ಜವಳಿ ಅಭಿವೃದ್ಧಿ ಆಯುಕ್ತರಿಗೆ ಪತ್ರ ಬರೆದು ಹಣವನ್ನು ವಾಪಸ್ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
“ಸರ್ಕಾರವು ನಮ್ಮೊಂದಿಗೆ ಸೇರುವ ಉದ್ದೇಶವನ್ನು ಘೋಷಿಸಿದಾಗ ನಾವು ಸಂತೋಷಗೊಂಡಿದ್ದೆವು. ಹಲವಾರು ವರ್ಷಗಳ ನಂತರ, ರೂ. 33 ಲಕ್ಷ ಬಿಡುಗಡೆಯಾಯಿತು ಮತ್ತು ಆ ಹಣ ಜಂಟಿ ಖಾತೆಯಲ್ಲಿ ಕುಳಿತಿದೆ. ಒಂದಲ್ಲ ಒಂದು ಕಾರಣವನ್ನು ನೀಡಿ, ಸರ್ಕಾರದ ಹಣ ಬಿಡುಗಡೆಯಾಗದಂತೆ ಮಾಡಲಾಗಿದೆ. ಕಳೆದ ಏಳು ವರ್ಷಗಳಿಂದ ಪದೇ ಪದೇ ಸರ್ಕಾರಕ್ಕೆ ಮನವಿ ಮಾಡಿ ಬೇಸತ್ತು ಹೋಗಿದ್ದೇವೆ . ಅದಕ್ಕಾಗಿ ಈಗ ದಯವಿಟ್ಟು ಹಣವನ್ನು ಹಿಂದಕ್ಕೆ ತೆಗೆದುಕೊಂಡು ಲಂಚಗುಳಿತನದಿಂದ ನಮ್ಮನ್ನು ಬಿಡುಗಡೆ ಮಾಡಿ ಎಂದು ಕೇಳಿಕೊಳ್ಳುತ್ತಿದ್ದೇವೆ” ಎಂದು ಪ್ರಸನ್ನ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.