ಲಂಡನ್ : ಪ್ರಮುಖ ಬ್ರಿಟಿಷ್ ನಿಯತಕಾಲಿಕೆ ಬ್ರಿಟಿಷ್ ಹೆರಾಲ್ಡ್ ಮ್ಯಾಗಜೀನ್ ನಡೆಸಿದ ಮತದಾನವನ್ನು ಗೆದ್ದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು, ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿ 2019 ಆಗಿ ಹೊರಹೊಮ್ಮಿದ್ದಾರೆ.
ಬ್ರಿಟಿಷ್ ಹೆರಾಲ್ಡ್ ನಡೆಸಿದ ಮತದಾನ ಕಳೆದ ಶನಿವಾರ ಮಧ್ಯರಾತ್ರಿ ಅಂತ್ಯಗೊಂಡಿದೆ. ಈ ಮತದಾನದಲ್ಲಿ ಹಲವಾರು ವಿಶ್ವನಾಯಕರನ್ನು ಮತ್ತು ರಾಜಕಾರಣಿಗಳನ್ನು ಹಿಂದಿಕ್ಕಿರುವ ಮೋದಿ ವಿಜೇತರಾಗಿ ಹೊರಹೊಮ್ಮಿದ್ದಾರೆ.
ಮೋದಿಯವರು ಶೇ.30.9 ರಷ್ಟು ಮತಗಳಿಂದ ಗೆಲುವನ್ನು ಸಾಧಿಸಿದ್ದಾರೆ.
ತಮ್ಮ ಸನಿಹದ ಪ್ರತಿಸ್ಪರ್ಧಿಗಳಾಗಿದ್ದ ರಷ್ಯಾ ವ್ಲಾಡಿಮಿರ್ ಪುಟಿನ್, ಅಮೆರಿಕಾದ ಡೊನಾಲ್ಡ್ ಟ್ರಂಪ್, ಚೀನಾದ ಕ್ಸಿ ಜಿನ್ ಪಿಂಗ್ ಅವರನ್ನು ಮೋದಿಯವರು ಕ್ರಮವಾಗಿ ಶೇ.29.9, ಶೇ.21.9 ಮತ್ತು ಶೇ.18.1ರಷ್ಟು ಮತಗಳಿಂದ ಮೋದಿ ಸೋಲಿಸಿದ್ದು, ವಿಶ್ವದ ಪ್ರಭಾವಿಯಾಗಿ ಹೊರಹೊಮ್ಮಿದ್ದಾರೆ.
ರೇಡಾರ್ ಮತದಾನಕ್ಕೆ 25ಕ್ಕೂ ಅಧಿಕ ನಾಯಕರನ್ನು ನಾಮನಿರ್ದೇಶನಗೊಳಿಸಲಾಗಿತ್ತು, ತಜ್ಞರು ಅಂತಿಮ ಸುತ್ತಿನಲ್ಲಿ ನಾಲ್ಕು ಮಂದಿ ಆಯ್ಕೆಯಾಗಿದ್ದರು.
ನಾಯಕರ ಬಗ್ಗೆ ಸಾಕಷ್ಟು ಅಧ್ಯಯನ, ಸಂಶೋಧನೆಗಳಿಗೆ ನಡೆಸಿ ನಾಮನಿರ್ದೇಶನಗಳನ್ನು ಆಯ್ಕೆ ಮಾಡಲಾಗಿದೆ. ಅಲ್ಲದೇ, ಒನ್ ಟೈಮ್ ಪಾಸ್ವರ್ಡ್ ಮೂಲಕ ಜನರಿಗೆ ಮತದಾನ ಮಾಡುವ ಅವಕಾಶ ನೀಡಲಾಗಿತ್ತು. ಇದರಿಂದಾಗಿ ಮತದಾನ ಪ್ರಕ್ರಿಯೆ ಹೆಚ್ಚು ನಿಖರವಾಗಿತ್ತು. ಮತದಾನದ ಮೊದಲ ದಿನವೇ ಬ್ರಿಟಿಷ್ ಹೆರಾಲ್ಡ್ 2.5 ಮಿಲಿಯನ್ ಹಿಟ್ಸ್ ಗಳಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.