ನವದೆಹಲಿ: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಬಗ್ಗೆ ಫೇಕ್ ನ್ಯೂಸ್ ಹರಿಬಿಟ್ಟ ದಿ ಇಂಡಿಯನ್ ಎಕ್ಸ್ಪ್ರೆಸ್ ಮತ್ತು ಎಕ್ಸ್ಪ್ರೆಸ್ ಗ್ರೂಪ್ನ ಮರಾಠಿ ದಿನಪತ್ರಿಕೆ ಲೋಕಸತ್ತ ವಿರುದ್ಧ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಖಂಡನೆ ವ್ಯಕ್ತಪಡಿಸಿದೆ. ಪತ್ರಕರ್ತ ಕರಣ್ ಥಾಪರ್ ಮತ್ತು ಲೋಕಸತ್ತ ಸಂಪಾದಕ ಗಿರೀಶ್ ಕುಬೇರ್ ಭಾಗವತ್ ಅವರ ಮಾತುಗಳನ್ನು ತಿರುಚಿ ಲೇಖನವನ್ನು ಪ್ರಕಟಗೊಳಿಸಿದ್ದರು.
2018ರ ಸೆ. 21 ರಂದು ಮರಾಠಿ ಪತ್ರಿಕೆ ಲೋಕಸತ್ತ ಸಂಪಾದಕೀಯವೊಂದನ್ನು ಬರೆದಿತ್ತು, ಇದರಲ್ಲಿ “2015ರಲ್ಲಿ ಮೊಹಮ್ಮದ್ ಅಕ್ಲಾಫ್ ಅನ್ನು ಬೀಫ್ ಸಂಗ್ರಹಿಸಿದ ಆರೋಪದ ಮೇರೆಗೆ ಹಿಗ್ಗಾಮುಗ್ಗಾ ಥಳಿಸಿ ಕೊಲ್ಲಲಾಗಿತ್ತು. ಈ ವೇಳೆ RSS ಮುಖ್ಯಸ್ಥ ಮೋಹನ್ ಭಾಗವತ್ ಅವರು “ವೇದಗಳಲ್ಲಿ ಗೋವು ಹಂತಕರ ಹತ್ಯೆಯನ್ನು ಪ್ರತಿಪಾದಿಸಲಾಗಿದೆ’ ಎಂಬ ಪ್ರತಿಕ್ರಿಯೆಯನ್ನು ನೀಡಿದ್ದರು. ಘಟನೆ ನಡೆದ ಮೂರು ದಿನಗಳ ತರುವಾಯ ಭಾಗವತ್ ಈ ಹೇಳಿಕೆ ನೀಡಿದ್ದರು” ಎಂದು ಗಿರೀಶ್ ಕುಬೇರ್ ಸಂಪಾದಕೀಯದಲ್ಲಿ ಬರೆದಿದ್ದರು.
ಅದೇ ದಿನ ಇಂಡಿಯನ್ ಎಕ್ಸ್ಪ್ರೆಸ್ನಲ್ಲಿ ಕರಣ್ ಥಾಪರ್ ‘ಹ್ಯಾಸ್ ದಿ RSS ಗ್ರೌಂಡ್ ಶಿಫ್ಟೆಡ್?” ಒಂದು ಲೇಖನ ಬರೆದಿದ್ದರು, ಇದರಲ್ಲಿ “ಭಾಗವತ್ ಅವರು ಅವಹೇಳನಕಾರಿ ಹೇಳಿಕೆ ನೀಡುವುದಕ್ಕೆ ಹಿಂಜರಿಯುವುದಿಲ್ಲ. 2015ರಲ್ಲಿ ಮೊಹಮ್ಮದ್ ಅಕ್ಲಾಫ್ ಹತ್ಯೆಯಾದಾಗ, ವೇದಗಳು ಗೋವು ಹಂತಕರನ್ನು ಹತ್ಯೆ ಮಾಡುವುದನ್ನು ಪ್ರತಿಪಾದಿಸುತ್ತದೆ ಎಂದಿದ್ದರು” ಎಂದಿದ್ದಾರೆ.
ಭವಿಷ್ಯ ಕಾ ಭಾರತ್ ಎಂಬ ಮೂರು ದಿನಗಳ ಕಾನ್ಫರೆನ್ಸ್ನಲ್ಲಿ ಭಾಗಿಯಾಗಿದ್ದಾಗ ಮೋಹನ್ ಭಾಗವತ್ ನೀಡಿದ್ದ ಹೇಳಿಕೆಯನ್ನು ಆಧರಿಸಿ ಈ ಮೇಲಿನ ಲೇಖನಗಳನ್ನು ಬರೆಯಲಾಗಿತ್ತು. ಆದರೆ ಭಾಗವತ್ ಮಾತನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳು ಪ್ರಕಟಿಸಿದ್ದವು, ಆದರೆ ಎಲ್ಲೂ ಕೂಡ ಗೋವು ಹಂತಕರಿಗೆ ವೇದಗಳಲ್ಲಿ ಹತ್ಯೆಯೇ ಶಿಕ್ಷೆ ಎಂದು ಭಾಗವತ್ ಪ್ರತಿಪಾದಿಸಿದ್ದು ವರದಿಯಾಗಿಲ್ಲ. ಅಸಲಿಗೆ ಭಾಗವತ್ ಆ ರೀತಿ ಹೇಳಿಯೇ ಇಲ್ಲ. ಕರಣ್ ಥಾಪರ್ ಮತ್ತು ಗಿರೀಶ್ ಕುಬೇರ್ ಫೇಕ್ ಸುದ್ದಿಯನ್ನು ಹರಿಬಿಟ್ಟಿದ್ದರು.
ಮಹಾರಾಷ್ಟ್ರದ ಅಕ್ಷಯ್ ಪಾಠಕ್ ಎಂಬುವವರು ಈ ಫೇಕ್ ನ್ಯೂಸ್ ವಿರುದ್ಧ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಲಾಗಿತ್ತು, ಪತ್ರಕರ್ತರು ತಪ್ಪು ಮಾಡಿದ್ದಾರೆ ಎಂಬುದು ತನಿಖೆಯಿಂದ ಸಾಬೀತಾಗಿದೆ. ಇದೀಗ ಈ ಎರಡು ಪತ್ರಕರ್ತರ ಕೃತ್ಯಕ್ಕೆ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಖಂಡನೆ ವ್ಯಕ್ತಪಡಿಸಿದ್ದು, ಅವರಿಂದ ಕ್ಷಮೆಯಾಚನೆಯನ್ನೂ ಸ್ವೀಕರಿಸಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.