ಬೆಂಗಳೂರು: ಕರ್ನಾಟಕದಾದ್ಯಂತ 650 ಎಲೆಕ್ಟ್ರಿಕ್ ವೆಹ್ಹಿಕಲ್ ಚಾರ್ಜಿಂಗ್ ಸ್ಟೇಶನ್ಗಳನ್ನು ಸ್ಥಾಪನೆ ಮಾಡಲು ಬೆಂಗಳೂರು ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ(ಬೆಸ್ಕಾಂ) ನಿರ್ಧರಿಸಿದೆ. ಇದರಲ್ಲಿ 100 ಚಾರ್ಜಿಂಗ್ ಸ್ಟೇಶನ್ಗಳು ಬೆಂಗಳೂರಿನಲ್ಲೇ ಸ್ಥಾಪನೆಗೊಳ್ಳಲಿದೆ. ಎಲೆಕ್ಟ್ರಿಕ್ ವೆಹ್ಹಿಕಲ್ಗಳಿಗೆ ಹೆಚ್ಚಿನ ಉತ್ತೇಜನ ದೊರೆಯುತ್ತಿರುವ ಹಿನ್ನಲೆಯಲ್ಲಿ ಬೆಸ್ಕಾಂ ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಬೆಂಗಳೂರನ್ನು ಹೆಚ್ಚು ಕೇಂದ್ರೀಕರಿಸಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರುವುದಾಗಿ ಬೆಸ್ಕಾಂ ಹೇಳಿದೆ.
ಬೆಂಗಳೂರು ಪ್ರಸ್ತುತ 8,980 ಎಲೆಕ್ಟ್ರಿಕ್ ವೆಹ್ಹಿಕಲ್ ಚಾರ್ಜಿಂಗ್ ಸ್ಟೇಶನ್ಗಳು ಕಾರ್ಯನಿರ್ವಹಿಸುತ್ತಿವೆ. ದೇಶದಾದ್ಯಂತ ನೋಂದಾಯಿಸಿಕೊಂಡ ಒಟ್ಟು ಚಾರ್ಜಿಂಗ್ ಸ್ಟೇಶನ್ಗಳ ಪೈಕಿ ಶೇ.57ರಷ್ಟು ಬೆಂಗಳೂರಿನಲ್ಲೇ ಇದೆ. 2018-19ರ ನಡುವೆ ಇಲ್ಲಿ ನೋಂದಾಯಿತ ಸ್ಟೇಶನ್ಗಳ ಪ್ರಮಾಣದಲ್ಲಿ ಶೇ.40ರಷ್ಟು ಏರಿಕೆ ಕಂಡಿದೆ.
ಬೆಂಗಳೂರು-ತುಮಕೂರು ಹೆದ್ದಾರಿಯ ಉಭಯ ಬದಿಗಳಲ್ಲಿ 50 ಕಿಮೀಗೊಂದರಂತೆ, ಬೆಂಗಳೂರು-ಮೈಸೂರು ಹೆದ್ದಾರಿಯ ಉಭಯ ಬದಿಗಳಲ್ಲಿ 100 ಕಿಮೀಗೊಂದರಂತೆ ಚಾರ್ಜಿಂಗ್ ಸ್ಟೇಶನ್ ಸ್ಥಾಪಿಸಲು ಬೆಸ್ಕಾಂ ನಿರ್ಧರಿಸಿದೆ. ಈಗಾಗಲೇ ಈ ಬಗೆಗಿನ ಪ್ರಸ್ತಾಪವನ್ನು ಇಂಧನ ದಕ್ಷ ಬ್ಯುರೋಗೆ ಕಳುಹಿಸಿಕೊಟ್ಟಿದ್ದು, ಅದರ ಅನುಮೋದನೆಗಾಗಿ ಕಾಯುತ್ತಿದೆ.
“ಸ್ಥಳಾವಕಾಶದ ನಿರ್ಬಂಧದಿಂದಾಗಿ, ಪ್ರಸ್ತಾವಿತ EV ಚಾರ್ಜಿಂಗ್ ಸ್ಟೇಶನ್ಗಳಲ್ಲಿ ಬಹುತೇಕವು ಸರ್ಕಾರಿ ಕಚೇರಿಗಳು ಮತ್ತು ಸಂಕೀರ್ಣಗಳಲ್ಲಿ ಸ್ಥಾಪನೆಗೊಳ್ಳಲಿವೆ. ಬೆಂಗಳೂರಿನ ಬಳಿಕ, ಮೈಸೂರು, ಹುಬ್ಬಳ್ಳಿ-ಧಾರವಾಡ ಮತ್ತು ದಾವಣಗೆರೆಯಲ್ಲಿ ಸ್ಟೇಶನ್ಗಳನ್ನು ಸ್ಥಾಪಿಸಲಾಗುವುದು ಮತ್ತು ನಂತರ ಶಿವಮೊಗ್ಗ ಮತ್ತು ಬೆಳಗಾವಿಗಳಲ್ಲಿ ಸ್ಥಾಪಿಸಲಾಗುವುದು” ಎಂದು ಸ್ಮಾರ್ಟ್ ಗ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಕ್ಕಾಗಿನ ಬೆಸ್ಕಾಂ ಉಪ ಪ್ರಧಾನ ಜನರಲ್ ಮ್ಯಾನೇಜರ್ ಸಿ.ಕೆ. ಶ್ರೀನಾಥ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.