ನವದೆಹಲಿ: ಹೊಸ ಮಾದರಿಯ ಸ್ಮಾರ್ಟ್ಫೂನ್ಗಳನ್ನು ಹೊರತರುವ ಪ್ರಯತ್ನದಲ್ಲಿ ಐಬಾಲ್ ಕಂಪೆನಿಯು ಕ್ಯಾಮೆರಾವನ್ನು 180 ಡಿಗ್ರಿ ತಿರುಗಿಸಬಲ್ಲ ಹೊಸ ಆಂಡ್ರಾಯ್ಡ್ ಕಿಟ್ಕ್ಯಾಟ್ ಆಧಾರಿತ iBall Andi Avonte 5 ಅನ್ನು ಪರಿಚಯಿಸಿದೆ.
180 ಡಿಗ್ರಿ ತಿರುಗಬಲ್ಲ ೮ ಮೆಗಾ ಪಿಕ್ಸೆಲ್ ಕ್ಯಾಮೆರಾ ಇದು , ಫ್ರಂಟ್ ಹಾಗೂ ರಿಯರ್ ಕ್ಯಾಮರಾವನ್ನಾಗಿ ಬಳಸಬಹುದಾಗಿದೆ. ಜೊತೆಗೆ ಡ್ಯುಯಲ್ ಎಲ್ಇಡಿ ಫ್ಲಾಶ್ ಕೂಡ ಹೊಂದಿದೆ. ಈ ಸ್ಮಾರ್ಟ್ಫೋನ್ 5-ಇಂಚ್ ಐಪಿಎಸ್ ಡಿಸ್ಪ್ಲೇ, 1.3 ಜಿಎಚ್ಝಡ್ ಕ್ವಾಡ್ಕೋರ್ ಪ್ರೋಸೆಸರ್ನೊಂದಿಗೆ 1ಜಿಬಿ ರೇಮ್ ಒಳಗೊಂಡಿದೆ. ೮ಜಿಬಿ ಇಂಟರ್ನಲ್ ಮೆಮೋರಿ ಮತ್ತು ೩೨ಜಿಬಿ ವಿಸ್ತರಿಸಬಲ್ಲ ಮೈಕ್ರೋ ಎಸ್ಡಿ ಕಾರ್ಡ್ ಅಳವಡಿಸಬಹುದಾಗಿದೆ. 2150 ಎಂಎಎಚ್ ಬ್ಯಾಟರಿ ಹೊಂದಿದೆ.
ಇದು 3ಡಿ ಇಂಟರ್ಫೇಸ್ ಒಳಗೊಂದಿದ್ದು, 21 ಪ್ರಾದೇಶಿಕ ಭಾಷೆಗಳು ಲಭ್ಯವಿದೆ. 3ಜಿ ಸಪೋರ್ಟ್ನೊಂದಿಗೆ ಡ್ಯುಯಲ್ ಸಿಮ್, ವೈಫೈ, ಯುಎಸ್ಬಿ ಸಂಪರ್ಕ ನೀಡುತ್ತದೆ.
ಇದರ ಬೆಲೆ ಕೇವಲ ರೂ.5999 ಇದ್ದು, ಕೆಲವೇ ದಿನಗಳಲ್ಲಿ ದೇಶದಾದ್ಯಂತ ಲಭ್ಯವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.