ನವದೆಹಲಿ: ದೇಶದಾದ್ಯಂತ ಇರುವ ಎಲ್ಲಾ ವಕ್ಫ್ ಆಸ್ತಿಗಳನ್ನು ಜಿಯೋ-ಟ್ಯಾಗ್ ಮಾಡಲಾಗುವುದು ಮತ್ತು ಇಂತಹ ಆಸ್ತಿಗಳಲ್ಲಿ ಸಮಾಜದ ಒಳಿತಿಗಾಗಿ ಶೈಕ್ಷಣಿಕ ಸಂಸ್ಥೆ, ಆಸ್ಪತ್ರೆಗಳನ್ನು ನಿರ್ಮಾಣ ಮಾಡಲು ಸರ್ಕಾರವೇ ಶೇ.100ರಷ್ಟು ಅನುದಾನವನ್ನು ಒದಗಿಸಲಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
ಬುಧವಾರ 80ನೇ ಕೇಂದ್ರೀಯ ವಕ್ಫ್ ಮಂಡಳಿ ಸಭೆಯನ್ನು ನಡೆಸಿದ ನಖ್ವಿ ಅವರು, ದೇಶದಾದ್ಯಂತ ಸುಮಾರು 5.77 ಲಕ್ಷ ನೋಂದಾಯಿತ ವಕ್ಫ್ ಆಸ್ತಿಗಳಿವೆ. ಅವುಗಳನ್ನು ಜಿಯೋ ಟ್ಯಾಗ್ ಮತ್ತು ಡಿಜಿಟಲೀಕರಣ ಮಾಡುವುದರಿಂದ ದಾಖಲೆಗಳ ಪಾರದರ್ಶಕತೆ ಮತ್ತು ಸುರಕ್ಷತೆ ಸಾಧ್ಯವಾಗುತ್ತದೆ ಎಂದಿದ್ದಾರೆ.
ದೇಶದಾದ್ಯಂತ ವಕ್ಫ್ ಆಸ್ತಿಗಳನ್ನು ಅಗತ್ಯವಿರುವವರ, ಅದರಲ್ಲೂ ಸ್ವಾತಂತ್ರ್ಯದಿಂದ ವಂಚಿತರಾಗಿರುವ ಬಡ ಮುಸ್ಲಿಂ ಹೆಣ್ಣು ಮಕ್ಕಳ ಶೈಕ್ಷಣಿಕ ಸಬಲೀಕರಣ ಮತ್ತು ಉದ್ಯೋಗ ಆಧರಿತ ಕೌಶಲ್ಯಾಭಿವೃದ್ಧಿಗಳಿಗೆ ಬಳಸಿಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರ ಕಾರ್ಯಕ್ರಮವನ್ನು ಆರಂಭಿಸಲಿದೆ ಎಂದು ನಖ್ವಿ ತಿಳಿಸಿದ್ದಾರೆ.
ಪ್ರಧಾನಮಂತ್ರಿ ಜನ ವಿಕಾಸ್ ಕಾರ್ಯಕ್ರಮದಡಿಯಲ್ಲಿ ಮೋದಿ ನೇತೃತ್ವದ ಸರ್ಕಾರವು ವಕ್ಫ್ ಆಸ್ತಿಗಳಲ್ಲಿ ಶಾಲೆ, ಕಾಲೇಜು, ಐಟಿಐ, ಪಾಲಿಟೆಕ್ನಿಕ್, ಆಸ್ಪತ್ರೆ, ಬಹುಪ್ರಯೋಜಕ ಸಮುದಾಯ ಭವನ ‘ಸದ್ಭಾವ ಮಂಟಪ್’ ಅನ್ನು ನಿರ್ಮಾಣ ಮಾಡಲು ಶೇ.100ರಷ್ಟು ಹಣಕಾಸನ್ನು ಒದಗಿಸಲಿದೆ ಎಂದಿದ್ದಾರೆ.
ವಕ್ಫ್ ಆಸ್ತಿಗಳು ಮುಸ್ಲಿಂ ಸಮುದಾಯವರ ಏಳಿಗೆಗಾಗಿಯೇ ಬಳಕೆಯಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಜಿಯೋ ಟ್ಯಾಂಗಿಂಗ್ ಮತ್ತು ಡಿಜಿಟಲೀಕರಣವನ್ನು ಪರಿಚಯಿಸಲಾಗುತ್ತಿದೆ ಎಂದಿದ್ದಾರೆ.
ದೇಶದ 90 ಜಿಲ್ಲೆಗಳನ್ನು ಅಲ್ಪಸಂಖ್ಯಾತ ಜಿಲ್ಲೆಗಳು ಎಂದು ಪರಿಗಣಿಸಿ ಹಿಂದಿನ ಮೋದಿ ಸರ್ಕಾರ ಅಭಿವೃದ್ಧಿಪಡಿಸಿದೆ. ಇದೀಗ ಆ ಯೋಜನೆಯನ್ನು 308 ಜಿಲ್ಲೆಗಳಿಗೆ ವಿಸ್ತರಣೆಗೊಳಿಸಲಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.