ವಾಷಿಂಗ್ಟನ್ : ಒಂದು ರಾತ್ರಿ 35 ಸಾವಿರ ಡಾಲರ್ ವ್ಯಯಿಸುವ ಸಾಮರ್ಥ್ಯವುಳ್ಳವರಿಗೆ ನಾಸಾ ಅಮೋಘವಾದ ಆಫರ್ ನೀಡಿದೆ. ಈ ಆಫರ್ ಅನ್ವಯ ಸಾರ್ವಜನಿಕರು ಒಂದು ತಿಂಗಳುಗಳ ಕಾಲ ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಶನ್ (ISS(ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ )ನಲ್ಲಿ ತಂಗಬಹುದಾಗಿದೆ.
ಖಾಸಗಿ ವ್ಯಕ್ತಿಗಳು ಬೋಯಿಂಗ್ ಕೋ ಮತ್ತು ಎಲೋನ್ ಮುಸ್ಕ್ನ ಸ್ಪೇಸ್ ಎಕ್ಸ್ ಅಭಿವೃದ್ಧಿಪಡಿಸಿದ ISS ಅಬೋರ್ಡ್ ರಾಕೆಟ್ ಮತ್ತು ಕ್ಯಾಪ್ಸೂಲ್ ಲಾಂಚ್ ಸಿಸ್ಟಮ್ ಮೂಲಕ ISSಗೆ ತೆರಳಬಹುದಾಗಿದೆ, ಸುಮಾರು ಎರಡು ದಶಕಗಳಲ್ಲಿ ಮೊದಲ ಬಾರಿಗೆ ಯುಎಸ್ ಮಣ್ಣಿನಿಂದ ISS ಗೆ ಗಗನಯಾತ್ರಿಗಳನ್ನು ಹಡಗಿನಲ್ಲಿ ಸಾಗಿಸಲು ಎರಡು ಕಂಪನಿಗಳು ಸಿದ್ಧವಾಗಿವೆ.
ವರ್ಷಕ್ಕೆ ಎರಡು ಬಾರಿ ISSಗೆ ಪ್ರವಾಸವನ್ನು ನಾಸಾ ಆಯೋಜನೆಗೊಳಿಸಲಿದೆ. ತಲಾ 30 ದಿನಗಳ ಕಾಲ ಪ್ರವಾಸ ಇರಲಿದೆ. ಮೊದಲ ಪ್ರವಾಸ 2020 ರಿಂದಲೇ ಆರಂಭಗೊಳ್ಳುವ ನಿರೀಕ್ಷೆ ಇದೆ.
ಆದರೆ ಇದು ಅತ್ಯಂತ ದುಬಾರಿ ಪ್ರವಾಸವಾಗಲಿದೆ. ಒಂದು ಸೀಟಿಗೆ $50 ಮಿಲಿಯನ್ ಖರ್ಚಾಗಲಿದೆ ಎಂದು ನಾಸಾ ಅಂದಾಜಿಸಿದೆ. ಹೆಚ್ಚುವರಿಯಾಗಿ, ಫುಡ್, ಸ್ಟೋರೇಜ್ ಮತ್ತು ಕಮ್ಯುನೀಕೇಶನ್ ದರವನ್ನು ತೆರಬೇಕಾಗುತ್ತದೆ.
ಬೋಯಿಂಗ್ ಮತ್ತು ಸ್ಪೇಸ್ ಎಕ್ಸ್ ಪ್ರವಾಸಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಿದೆ ಎಂದು ನಾಸಾ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.