ನವದೆಹಲಿ: ಮುಂದಿನ ಐದು ವರ್ಷ ಭಾರತದ ಪಾಲಿಗೆ ಅತ್ಯಂತ ಮಹತ್ವಪೂರ್ಣವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಜಾಗತಿಕ ಮಟ್ಟದಲ್ಲಿ ದೇಶ ಬಹುದೊಡ್ಡ ಪಾತ್ರವನ್ನು ನಿಭಾಯಿಸಲಿದೆ ಎಂದು ಭಾರತದಲ್ಲಿನ ಜಪಾನ್ ರಾಯಭಾರಿ ಕೆಂಜಿ ಹಿರಮತ್ಸು ಹೇಳಿದ್ದಾರೆ. “ಉತ್ತಮ ಮೂಲಸೌಕರ್ಯಗಳನ್ನು ಹೊಂದಲು ಮತ್ತು ಸೋಶಲ್ ಇಕ್ವಿಟಿ ಮತ್ತು ಸಾಮಾಜಿಕ ನ್ಯಾಯ ವಿಷಯಗಳನ್ನು ಬಗೆಹರಿಸಲು ಭಾರತ ಕ್ರಿಯಾತ್ಮಕ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಿದೆ” ಎಂದು ಅವರು ಅಭಿಪ್ರಾಯಿಸಿದ್ದಾರೆ.
‘ಜಪಾನೀಸ್ ಇಂಪೀರಿಯಲ್ ಸಕ್ಸೀಷನ್ ಆ್ಯಂಡ್ ಇಂಡಿಯಾ-ಜಪಾನ್ ರಿಲೇಶನ್ಸ್ ಇನ್ ದಿ ನ್ಯೂ ರೀವಾ ಎರಾ’ ಎಂಬ ಥೀಮ್ನಲ್ಲಿ ಕೈಗಾರಿಕಾ ಮಂಡಳಿ FICCI ಆಯೋಜನೆಗೊಳಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. 2010ರ ಮೇ 1ರಂದು ಜಪಾನಿನ ರಾಜನಾಗಿ ನುರುಹಿಟೊ ಅಧಿಕೃತವಾಗಿ ನೇಮಕವಾದರು ಮತ್ತು ಅವರು ‘ರಿವಾ’ ಎಂಬ ಹೊಸ ಯುಗದ ಪರಿನೀಡಿದರು. ರಿವಾ ಎಂದರೆ ‘ಸುಂದರ ಸೌಹಾರ್ದತೆ” ಎಂದು ಅರ್ಥ.
“ನಾವು ರಿವಾ ಎಂಬ ಹೊಸ ಯುಗವನ್ನು ಹೊಂದಿದ್ದೇವೆ ಮತ್ತು ಭಾರತ ನರೇಂದ್ರ ಮೋದಿಯವರ ಪುನರಾಯ್ಕೆ ಮತ್ತು ನೂತನ ಸಂಪುಟದೊಂದಿಗೆ ಹೊಸ ಆರಂಭಕ್ಕೆ ಪ್ರವೇಶಿಸಿದೆ. ಮುಂದಿನ ಐದು ವರ್ಷ ಭಾರತಕ್ಕೆ ಅತ್ಯಂತ ಮಹತ್ವದ್ದು ಎಂಬ ಭರವಸೆ ನನಗಿದೆ, ಭಾರತ ಹೆಚ್ಚು ಸಮೃದ್ಧವಾಗಲಿದೆ, ಜನರು ಹೆಚ್ಚು ಸಂತುಷ್ಟರಾಗಲಿದ್ದಾರೆ ಮತ್ತು ಪರಸ್ಪರ ಕಾಳಜಿಯನ್ನು ಹೊಂದಿರುವವರಾಗಲಿದ್ದಾರೆ ಮತ್ತು ಜಾಗತಿಕ ವೇದಿಕೆಯಲ್ಲಿ ಇನ್ನಷ್ಟು ಹೆಚ್ಚಿನ ಪಾತ್ರವನ್ನು ಭಾರತ ವಹಿಸುತ್ತದೆ” ಎಂದು ಕೆಂಜಿ ಹಿರಮತ್ಸು ಹೇಳಿದ್ದಾರೆ.
ಜಪಾನ್ ಕೇವಲ ಬುಲೆಟ್ ರೈಲು ಯೋಜನೆಯನ್ನು ಮಾತ್ರ ಬೆಂಬಲಿಸುವುದಿಲ್ಲ, ಭಾರತದ ಎಲ್ಲಾ ತಳಮಟ್ಟದ ಯೋಜನೆಯನ್ನೂ ಬೆಂಬಲಿಸಲಿದೆ. ರಸ್ತೆ, ಸೇತುವೆ ಮುಂತಾದ ಮೂಲಸೌಕರ್ಯ ಯೋಜನೆಗಳನ್ನೂ ಬೆಂಬಲಿಸಲಿದೆ ಎಂದು ಅವರು ಭರವಸೆಯನ್ನು ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.