ನವದೆಹಲಿ: ಜೂನ್ 7 ರಿಂದ ಫ್ರಾನ್ಸ್ನಲ್ಲಿ ಫಿಫಾ ಮಹಿಳಾ ವಿಶ್ವಕಪ್ 2019 ಆರಂಭಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಗೂಗಲ್ ಅತ್ಯಂತ ವರ್ಣಮಯ ಡೂಡಲ್ ಬಿಡಿಸಿ ವಿಶ್ವಕಪ್ ಅನ್ನು ಸ್ವಾಗತ ಮಾಡಿದೆ. ವಿಶ್ವಕಪ್ನಲ್ಲಿ ಭಾಗಿಯಾಗುವ ಪ್ರತಿ ದೇಶಗಳನ್ನೂ ಪ್ರತಿನಿಧಿಸುವ ಆಟಗಾರರ ಚಿತ್ರವನ್ನು ಡೂಡಲ್ ಒಳಗೊಂಡಿದೆ.
ಚಿತ್ರದಲ್ಲಿ ಒಂದೊಂದು ತಂಡದ ಸಮವಸ್ತ್ರ ತೊಟ್ಟ ಆಟಗಾರ್ತಿಯರು ಫುಟ್ಬಾಲ್ ಆಡುತ್ತಿರುವಂತೆ, ಕೆಲವರು ಚಿಯರ್ ಅಪ್ ಮಾಡುತ್ತಿರುವಂತೆ ಅತ್ಯಂತ ವರ್ಣಮಯವಾಗಿ ಗೂಗಲ್ ಡೂಡಲ್ ಅನ್ನು ರಚನೆ ಮಾಡಲಾಗಿದೆ.
ಫ್ರಾನ್ಸಿನ ಲ್ಯೋನ್ನಲ್ಲಿ ಜೂನ್ 7 ರಿಂದ ಮಹಿಳಾ ವಿಶ್ವಕಪ್ ಪಂದ್ಯಾಟ ಆರಂಭಗೊಂಡು ಜುಲೈ 7 ರಂದು ಮುಕ್ತಾಯಗೊಳ್ಳಲಿದ್ದು, 24 ದೇಶಗಳು ಇದರಲ್ಲಿ ಭಾಗಿಯಾಗುತ್ತಿವೆ. ಒಂದು ತಿಂಗಳು ಪಂದ್ಯಾಟ ಜರುಗಲಿದೆ. ಇದು ಫಿಫಾ ಮಹಿಳಾ ವಿಶ್ವಕಪ್ನ 8ನೇಯ ಆವೃತ್ತಿಯಾಗಿದೆ.
7 ತಂಡಗಳು ಇದರಲ್ಲಿ ಸತತ 8ನೇಯ ಬಾರಿಗೆ ಭಾಗಿಯಾಗುತ್ತಿದೆ. ಇವುಗಳ ಪೈಕಿ ಅಮೆರಿಕಾ ತಂಡವೂ ಒಂದು. ಹಾಲಿ ಚಾಂಪಿಯನ್ ಆಗಿರುವ ಅಮೆರಿಕಾ ಈ ಬಾರಿ 4ನೇಯ ಬಾರಿಗೆ ವಿಶ್ವಕಪ್ ಗೆಲ್ಲುವ ಉತ್ಸಾಹದಲ್ಲಿದೆ.
ಚಿಲೆ, ಸ್ಕಾಟ್ ಲ್ಯಾಂಡ್, ಸೌತ್ ಆಫ್ರಿಕಾ, ಜಮೈಕಾ ಮೊದಲ ಬಾರಿಗೆ ವಿಶ್ವಕಪ್ ಕ್ರೀಡಾಕೂಟದಲ್ಲಿ ಭಾಗಿಯಾಗುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.