ಟೊರೆಂಟೋ: ಸುಮಾರು 3,500 ವರ್ಷಗಳ ಇತಿಹಾಸ ಹೊಂದಿರುವ ಸಂಸ್ಕೃತ ಭಾಷೆ ಇನ್ನು ಮುಂದೆ ಕೆನಡಾದ ಟೊರೆಂಟೋ ಡಿಸ್ಟ್ರಿಕ್ಟ್ ಸ್ಕೂಲ್ ಬೋರ್ಡ್ (TDSB) ಸಿಲೆಬಸ್ನಲ್ಲಿ ಸ್ಥಾನ ಪಡೆದಿದೆ. ಕಿಂಡರ್ಗಾರ್ಟನ್ನಿಂದ ಹಿಡಿದು ಗ್ರೇಡ್ 8ರ ವರೆಗಿನ ಮಕ್ಕಳು ಅಲ್ಲಿ ಸಂಸ್ಕೃತವನ್ನು ಕಲಿಯುತ್ತಿದ್ದಾರೆ. ಎನ್ಜಿಓ ಸಂಸ್ಕೃತಿ ಭಾರತಿಯ ಶ್ರಮದ ಫಲವಾಗಿ ಈ ಯಶಸ್ಸು ದೊರೆತಿದೆ.
ಕಾರ್ನೆಕ್ ಪಬ್ಲಿಕ್ ಸ್ಕೂಲಿನಲ್ಲಿ ಪ್ರತಿ ಶನಿವಾರ ಬೆಳಿಗ್ಗೆ ಸಂಸ್ಕೃತವನ್ನು ಕಲಿಸಲಾಗುತ್ತಿದೆ. ಸುಮಾರು 24 ಮಕ್ಕಳು ಪ್ರಸ್ತುತ ಅದನ್ನು ಕಲಿಯುತ್ತಿದ್ದಾರೆ. ಟೊರೆಂಟೋ ಡಿಸ್ಟ್ರಿಕ್ಟ್ ಸ್ಕೂಲ್ ಬೋರ್ಡ್ ಕ್ರಮವನ್ನು ಬೆಂಬಲಿಸಿ ಉಳಿದ ಹಲವು ಶಾಲೆಗಳೂ ಸಂಸ್ಕೃತವನ್ನು ಕಲಿಸಲು ಆರಂಭಿಸಿವೆ.
ಸಂಸ್ಕೃತಿ ಭಾರತಿ ಕಳೆದ ಮೂರು ವರ್ಷಗಳಿಂದ ಸಂಸ್ಕೃತವನ್ನು ಪ್ರಚಾರಪಡಿಸುತ್ತಾ ಬರುತ್ತಿದೆ. ಸಮಕಾಲೀನ ಇತರ ಭಾಷೆಗಳಂತೆ ಅದನ್ನೂ ಪ್ರಚಲಿತಗೊಳಿಸುವುದು ಆ ಸಂಸ್ಥೆಯ ಗುರಿಯಾಗಿದೆ.
ಸಂಸ್ಕೃತವನ್ನು ಕೆನಡಾ ಶಾಲೆಗಳಲ್ಲಿ ಕಲಿಸಲಾಗುವ ಇತರ ಭಾರತೀಯ ಭಾಷೆಗಳ ಸಾಲಿನಲ್ಲಿ ಸೇರ್ಪಡೆಗೊಳಿಸಲಾಗಿದೆ. ಹಿಂದಿ, ಉರ್ದು, ಬಂಗಾಳಿ, ತಮಿಳು, ಗುಜರಾತಿ, ಮರಾಠಿಯನ್ನು ಅಲ್ಲಿನ ಶಾಲೆಗಳಲ್ಲಿ ಕಲಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.