ಶ್ರೀನಗರ: ಕಾಶ್ಮೀರ ಕಣಿವೆಯ 10 ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯನ್ನು ಭದ್ರತಾ ಪಡೆಗಳು ಬಿಡುಗಡೆಗೊಳಿಸಿವೆ. ಭಯೋತ್ಪಾದನೆಯನ್ನು ನಿರ್ಮೂಲನೆಗೊಳಿಸುವ ಕಾರ್ಯದ ಭಾಗವಾಗಿ ಈ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. 2010 ರಿಂದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುತ್ತಿರುವ ರಿಯಾಝ್ ಅಹ್ಮದ್ ನೈಕು ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾನೆ.
ಶ್ರೀನಗರದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರ ಮೊಹಮ್ಮದ್ ಅಶ್ರಕ್ ಖಾನ್, ಡಾ.ಸೈಫುಲ್ಲಾ, ಬಾರಮುಲ್ಲಾದ ಮೆಹ್ರಾಜ್ ಉದ್ ದಿನ್, ಕುಪ್ವಾರದ ಅಜಾಜ್ ಅಹ್ಮದ್ ಮಲಿಕ್, ಪುಲ್ವಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಷಾದ್ ಉಲ್ ಹಕ್ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇವರು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದವರಾಗಿದ್ದಾರೆ.
ಶೋಪಿಯಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಲಷ್ಕರ್ ಇ ತೋಯ್ಬಾದ ಉಗ್ರ ವಾಸಿಂ ಅಹ್ಮದ್ ಅಲಿಯಾಸ್ ಒಸಾಮ ಪಟ್ಟಿಯಲ್ಲಿದ್ದಾನೆ. ಜೈಶೇ ಇ ಮೊಹಮ್ಮದ್ ಸಂಘಟನೆಯ ಹಫೀಝ್ ಉಮರ್ ಮತ್ತು ಝೈದ್ ಶೇದ್, ಅಲ್ ಬದ್ರ್ ಸಂಘಟನೆಯ ಜಾವೇದ್ ಅಹ್ಮದ್ ಮಟ್ಟೋ ಹೆಸರು ಕೂಡ ಪಟ್ಟಿಯಲ್ಲಿದೆ.
ಈ ವರ್ಷ ಜಮ್ಮು ಕಾಶ್ಮೀರದಲ್ಲಿ 86 ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿದೆ, 20 ಉಗ್ರರನ್ನು ಬಂಧಿಸಲಾಗಿದೆ ಎಂದು ನಾರ್ದನ್ ಕಮಾಂಡ್ ಮುಖ್ಯಸ್ಥ ಲೆ.ಜ.ರಣ್ಬೀರ್ ಸಿಂಗ್ ಇತ್ತೀಚಿಗೆ ಹೇಳಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.