ನವದೆಹಲಿ: ಸೋಮವಾರ ಮಧ್ಯಾಹ್ನ ನಾಪತ್ತೆಯಾಗಿರುವ ಭಾರತೀಯ ವಾಯುಸೇನೆಯ ಎಎನ್-32 ಟ್ರಾನ್ಸ್ಪೋರ್ಟ್ ಏರ್ಕ್ರಾಫ್ಟ್ ಅನ್ನು ಪತ್ತೆ ಮಾಡುವ ಸಲುವಾಗಿ ಶೋಧ ಕಾರ್ಯಾಚರಣೆಗಳನ್ನು ಚುರುಕುಗೊಳಿಸಲಾಗಿದೆ. ಅಸ್ಸಾಂನ ಜೋರ್ಹತ್ನಿಂದ ಹಾರಾಟವನ್ನು ಆರಂಭಿಸಿರುವ ಈ ಏರ್ಕ್ರಾಫ್ಟ್ ಬಳಿಕ ನಾಪತ್ತೆಯಾಗಿದೆ. ಇದರಲ್ಲಿ 13 ಮಂದಿ ಸಿಬ್ಬಂದಿಗಳಿದ್ದರು.
ಮಧ್ಯಾಹ್ನ 12:25ಕ್ಕೆ ಈ ಏರ್ಕ್ರಾಫ್ಟ್ ಜೋರ್ಹತ್ನಿಂದ ಹಾರಾಟ ಆರಂಭಿಸಿತ್ತು, ಆದರೆ ಕೆಲವೇ ಕ್ಷಣಗಳ ಬಳಿಕ ಇದು ಸಂಪರ್ಕವನ್ನು ಕಡಿದುಕೊಂಡಿದೆ. ಈ ಹಿನ್ನಲೆಯಲ್ಲಿ ಸುಖೋಯ್-30 ಯುದ್ಧ ವಿಮಾನ ಮತ್ತು ಸಿ-130 ಸ್ಪೆಶಲ್ ಆಪರೇಶನ್ ಏರ್ಕ್ರಾಫ್ಟ್ ಮೂಲಕ ಶೋಧ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.
C-130, AN-32 ಏರ್ಕ್ರಾಫ್ಟ್, ಎರಡು Mi-17 and ಭಾರತೀಯ ಸೇನೆಯ ALH ಹೆಲಿಕಾಫ್ಟರ್ಗಳನ್ನೂ ಕೂಡ ಶೋಧ ಕಾರ್ಯಾಚರಣೆಗೆ ಇಳಿಸಲಾಗಿದೆ. ಇದುವರೆಗೆ ವಿಮಾನ ಪತನವಾದ ಯಾವುದೇ ಅವಶೇಷಗಳು ಪತ್ತೆಯಾಗಿಲ್ಲ ಎಂದು ಹೇಳಲಾಗಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ವಿಮಾನದ ನಾಪತ್ತೆಯ ಬಗ್ಗೆ ವಾಯುಸೇನಾ ಉಪ ಮುಖ್ಯಸ್ಥ ಏರ್ ಮಾರ್ಷಲ್ ರಾಕೇಶ್ ಸಿಂಗ್ ಬದೌರಿಯ ಅವರೊಂದಿಗೆ ಮಾತುಕತೆಯನ್ನು ನಡೆಸಿದ್ದಾರೆ.
ಭೂಸೇನೆ ಮತ್ತು ವಾಯುಸೇನಗಳು ಶೋಧ ಕಾರ್ಯಾಚರಣೆಯಲ್ಲಿ ಭಾಗಿಯಾಗುತ್ತಿವೆ. ನಾಪತ್ತೆಯಾದ ಏರ್ಕ್ರಾಫ್ಟ್ ನಲ್ಲಿ ಇದ್ದ 13 ಮಂದಿಯ ಜೀವದ ಬಗ್ಗೆ ಆತಂಕ ಎದುರಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.