ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಮೊದಲ 100 ದಿನಗಳಲ್ಲಿ ಹಲವಾರು ದೊಡ್ಡ ಸುಧಾರಣೆಗಳ ಘೋಷಣೆಯಾಗಲಿದೆ ಎಂದು ನೀತಿ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್ ಅವರು Reutersಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
“ಆರ್ಥಿಕತೆಯ ಉದಾರೀಕರಣ ಮತ್ತು ಸರ್ಕಾರದ ನಿಯಂತ್ರಣ ಸಡಿಲಿಕೆಯವರೆಗೆ ನೂತನ ಸರ್ಕಾರ ಹಲವಾರು ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳುವ ನಿರೀಕ್ಷೆ ಇದೆ, ಕಾರ್ಮಿಕ ಕಾನೂನನ್ನು ಆಧುನೀಕರಿಸಲು ಕ್ರಮ ತೆಗೆದುಕೊಳ್ಳಲಿದೆ, ಕೈಗಾರಿಕೆಗಳಿಗಾಗಿ ಲ್ಯಾಂಡ್ ಬ್ಯಾಂಕ್, ಸರ್ಕಾರ ನಿಯಂತ್ರಿತ ಸಂಸ್ಥೆಗಳ ಖಾಸಗೀಕರಣಕ್ಕೆ ಉತ್ತೇಜನದ ಕ್ರಮಗಳನ್ನು ತೆಗೆದುಕೊಳ್ಳಲಿದೆ” ಎಂದಿದ್ದಾರೆ.
“ವಿದೇಶಿ ಹೂಡಿಕೆದಾರರಿಗೆ ಖುಷಿ ಪಡಲು ಈಗ ಕಾರಣ ದೊರೆತಿದೆ. ಸುಧಾರಣೆಗಳು ಖಂಡಿತಾ ಕಂಡು ಬರಲಿದೆ ಎಂಬುದರ ಬಗ್ಗೆ ನಾನು ಭರವಸೆ ನೀಡುತ್ತೇನೆ” ಎಂದಿದ್ದಾರೆ.
ಅಸ್ತಿತ್ವದಲ್ಲಿರುವ 44 ಕೇಂದ್ರೀಯ ಕಾರ್ಮಿಕ ಕಾನೂನುಗಳನ್ನು ಕೇವಲ ನಾಲ್ಕು ಕೋಡ್ಗಳಾಗಿ ಏಕೀಕರಿಸುವುದು ಮೋದಿ ಸರ್ಕಾರದ ಗುರಿಯಾಗಿದೆ. ಇದು ವೇತನ, ಕೈಗಾರಿಕಾ ಸಂಬಂಧಗಳು, ಔದ್ಯೋಗಿಕ ಸುರಕ್ಷತೆ / ಆರೋಗ್ಯ / ಕೆಲಸದ ಪರಿಸ್ಥಿತಿಗಳು ಮತ್ತು ಸಾಮಾಜಿಕ ಭದ್ರತೆ / ಕಲ್ಯಾಣವನ್ನು ಪ್ರತ್ಯೇಕವಾಗಿ ಒಳಗೊಂಡಿರುತ್ತದೆ.
ಖಾಸಗೀಕರಣದ ಪ್ರಯತ್ನಗಳು 42-odd ಪಬ್ಲಿಕ್ ಸೆಕ್ಟರ್ ಕಂಪೆನಿಗಳ ಮೇಲೆ ಕೇಂದ್ರೀಕರಿಸುತ್ತವೆ, ಅವುಗಳಲ್ಲಿ ಕೆಲವು ಪರ್ಯಾಯವಾಗಿ ಸಂಪೂರ್ಣವಾಗಿ ಸ್ಥಗಿತಗೊಳ್ಳಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.