ನವದೆಹಲಿ: ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರುಗಳಾಗಿ ಪ್ರಮಾಣವಚನ ಸ್ವೀಕರಿಸಲು ಬಹುತೇಕ ಸಂಸದರು ಐಷಾರಾಮಿ ಕಾರುಗಳಲ್ಲಿ ರಾಷ್ಟ್ರಪತಿ ಭವನಕ್ಕೆ ಬಂದರೆ, ಇಬ್ಬರು ಮಾತ್ರ ಎಲ್ಲರಿಗಿಂತಲೂ ವಿಭಿನ್ನವಾಗಿ ಸೈಕಲ್ ಏರಿ ಪ್ರಮಾಣವಚನಕ್ಕೆ ಆಗಮಿಸಿದರು.
ಬಿಜೆಪಿಯ ಸಂಸದರಾದ ಮನ್ಸೂಖ್ ಲಾಲ್ ಮಾಂಡವೀಯಾ ಮತ್ತು ಅರ್ಜುನ್ ರಾಮ್ ಮೇಘಾವಲ್ ಅವರು ತಮ್ಮ ಮನೆಯಿಂದ ರಾಷ್ಟ್ರಪತಿ ಭವನದವರೆಗೂ ಸೈಕಲ್ನಲ್ಲೇ ಆಗಮಿಸಿದರು.
46 ವರ್ಷದ ಮಾಂಡವೀಯಾ ಅವರು ಕಳೆದ ಐದು ವರ್ಷಗಳಿಂದ ಸಂಸತ್ತಿಗೆ ಸೈಕಲಿನಲ್ಲಿ ಆಗಮಿಸುತ್ತಿದ್ದಾರೆ. ಈ ಬಗ್ಗೆ ಕೇಳಿದಾಗ, “ಸೈಕಲ್ ಸವಾರಿ ನನ್ನ ಫ್ಯಾಶನ್ ಅಲ್ಲ, ಅದು ನನ್ನ ಉತ್ಸಾಹದ ಒಂದು ಭಾಗ” ಎಂದಿದ್ದಾರೆ.
ಗುಜರಾತಿನ ಭವನಗರ್ ಜಿಲ್ಲೆಯವರಾದ ಮಾಂಡವೀಯಾ ಅವರು 2002ರಲ್ಲಿ ತನ್ನ 28ನೇ ವಯಸ್ಸಿನಲ್ಲಿ ಶಾಸಕನಾಗಿ ಗುಜರಾತಿನ ಅತ್ಯಂತ ಕಿರಿಯ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಪ್ರಸ್ತುತ ಅವರು ರಾಜ್ಯಸಭಾ ಸಂಸದರಾಗಿದ್ದು, ಎರಡನೇಯ ಅವಧಿಗೆ ಕೇಂದ್ರ ಸಚಿವರಾಗುತ್ತಿದ್ದಾರೆ.
ಐಎಎಸ್ ಅಧಿಕಾರಿಯಾಗಿ ರಾಜಕಾರಣಿಯಾಗಿ ಬದಲಾಗಿರುವ ಅರ್ಜುನ್ ರಾಮ್ ಮೇಘಾವಾಲ್ ಅವರಿಗೆ ಕಛೇರಿಗೆ ಸೈಕಲ್ ಸವಾರಿ ಮಾಡುವುದು ಒಂದು ರೀತಿಯ ಅಭಿರುಚಿಯಾಗಿದೆ. ಬಿಕನೇರಿನ ನೇಕಾರ ಸಮುದಾಯದಲ್ಲಿ ಜನಿಸಿದ ಇವರು 2009ರಲ್ಲಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ಹಿಂದಿನ ಮೋದಿ ಸರ್ಕಾರದಲ್ಲಿ ಇವರು ರಾಜ್ಯ ಖಾತೆಯನ್ನು ನಿಭಾಯಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.