ಇದೇ ಮೊದಲ ಬಾರಿಗೆ ಬದರಿ-ಕೇದಾರ್ ಸಮಿತಿಯ ಅಧ್ಯಕ್ಷರಾದ ಮೋಹನ್ ಪ್ರಸಾದ್ ತಪ್ಲಿಯಾಲ್ ಅವರಿಗೆ ನರೇಂದ್ರ ಮೋದಿಯವರ ಪದಗ್ರಹಣ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಮಿತಿ ಇದು ತಮಗೆ ನೀಡಲಾದ ಗೌರವ ಎಂದಿದೆ. ಮೋಹನ್ ತಪ್ಲಿಯಾಲ್ ಅವರು ಈ ರೀತಿಯ ಆಹ್ವಾನ ಮೋದಿಯವರ ಕಾರ್ಯ ವೈಖರಿಯನ್ನು ತೋರಿಸುತ್ತದೆ. ಬಹುನಿರೀಕ್ಷಿತ ಚಾರ್ ಧಾಮ್ ಅಭಿವೃದ್ಧಿ ಮೋದಿಯವರಿಂದ ಸಾಧ್ಯ ಎಂದರು. ಪ್ರಧಾನಿ ಮೋದಿಯವರನ್ನು ಮತ್ತೊಮ್ಮೆ ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳಿಗೆ ಆಹ್ವಾನಿಸುವ ಇರಾದೆ ಇದೆ ಎಂದರು.
ಈ ಮೊದಲು ಪ್ರಧಾನಿ ಮೋದಿಯವರು ಈ ಅವಳಿ ಮಂದಿರಗಳಿಗೆ ಭೇಟಿ ನೀಡಿದ್ದನ್ನು ಈ ಕ್ಷಣದಲ್ಲಿ ಸ್ಮರಿಸಬಹುದು. ಅವರು ಬದರಿ-ಕೇದಾರ್ ಸಮಿತಿಯ ಮತ್ತು ಇತ್ತೀಚೆಗೆ ಹತ್ಯೆಯಾದ 50 ಬಿಜೆಪಿ ಕಾರ್ಯಕರ್ತರ ಕುಟುಂಬಗಳನ್ನು ತಮ್ಮ ಪದಗ್ರಹಣ ಸಮಾರಂಭಕ್ಕೆ ಆಹ್ವಾನ ನೀಡಿರುವುದು ಅವರ ಧೀಮಂತ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.