ನವದೆಹಲಿ: ಶಾಲೆ ಬಿಟ್ಟ 18 ವರ್ಷಗಳ ಬಳಿಕ ಒರಿಸ್ಸಾದ ಮಲ್ಕನ್ ಗಿರಿಯ ಅಂಗನವಾಡಿ ಕಾರ್ಯಕರ್ತೆಯೊಬ್ಬರು ತಮ್ಮ ಮಗನೊಂದಿಗೆ 10ನೇ ತರಗತಿ ಪರೀಕ್ಷೆಯನ್ನು ಬರೆದು ತೇರ್ಗಡೆಯಾಗಿದ್ದಾರೆ.
ಬಸಂತಿ ಮುದುಲಿ ಅವರು ಕೊರ್ಲಕೋಟ ಗ್ರಾಮಪಂಚಾಯತ್ ಅಧೀನದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ದುಡಿಯುತ್ತಿದ್ದಾರೆ. ವಿದ್ಯಾಭ್ಯಾಸ ಮಾಡಬೇಕು ಎಂಬ ಅದಮ್ಯ ಆಸೆ ಇವರಿಗಿದ್ದರೂ ಮದುವೆಯ ಕಾರಣದಿಂದಾಗಿ ಅದು ಸಾಧ್ಯವಾಗಲಿಲ್ಲ. ಆದರೆ 18 ವರ್ಷಗಳ ತರುವಾಯ ತನ್ನ ಮಗನೂ ಮೆಟ್ರಿಕ್ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಅವರೂ ಪರೀಕ್ಷೆಯನ್ನು ಬರೆದಿದ್ದಾರೆ ಮತ್ತು ತೇರ್ಗಡೆಯಾಗಿದ್ದಾರೆ.
36 ವರ್ಷದ ಬಸಂತಿ ಮುದುಲಿ ಅವರಿಗೆ ಮೆಟ್ರಿಕ್ ಪೂರೈಸಲು ಸಾಧ್ಯವಾಗಲಿಲ್ಲ ಎಂಬ ಕೊರತೆ ಆಗಾಗ ಕಾಡುತ್ತಿತ್ತು. ಮಾತ್ರವಲ್ಲ, ಭಡ್ತಿ ಪಡೆಯಲೂ ಇದು ಅವರಿಗೆ ತೊಡಕಾಗಿತ್ತು. ಹೀಗಾಗಿ ದೊಡ್ಡ ಮಗನ ಪುಸ್ತಕಗಳನ್ನು ತಾನೂ ಓದಿಕೊಂಡು ಪರೀಕ್ಷೆಯನ್ನು ಬರೆದು ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದಾರೆ.
ಮಗನೇ ಇವರಿಗೆ ಕ್ಲಿಷ್ಟಕರವಾದ ವಿಷಯಗಳನ್ನು ಹೇಳಿಕೊಡುತ್ತಿದ್ದ, ಇದರಿಂದ ಅವರಿಗೆ ಸಾಕಷ್ಟು ಸಹಾಯವಾಯಿತು, ಕುಡುಮುಲ್ಗುಮ್ಮ ಹೈಸ್ಕೂಲ್ನಲ್ಲಿ ಅವರು ಓಪನ್ ಸ್ಕೂಲ್ ಬೋರ್ಡ್ ವಿದ್ಯಾರ್ಥಿನಿಯಾಗಿ ನೋಂದಾಯಿಸಿಕೊಂಡು ಪರೀಕ್ಷೆ ಬರೆದಿದ್ದಾರೆ.
ಮುದುಲಿ ಅವರು 203 ಅಂಕಗಳನ್ನು ಗಳಿಸಿ ಡಿ-ಗ್ರೇಡ್ನಲ್ಲಿ ತೇರ್ಗಡೆಗೊಂಡರೆ, ಅವರ ಮಗ 340 ಅಂಕಗಳನ್ನು ಪಡೆದುಕೊಂಡು ಸಿ ಗ್ರೇಡ್ನಲ್ಲಿ ತೇರ್ಗಡೆಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.