ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ದಾಖಲೆಯ ಜಯಗಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಧಿಕಾರವನ್ನು ಉಳಿಸಿಕೊಂಡು ಎರಡನೇ ಅವಧಿಗೆ ಸರ್ಕಾರದ ಚುಕ್ಕಾಣಿ ಹಿಡಿದಿದೆ. ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿರುವುದನ್ನು ತಿಳಿದ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಸಿಸ್ನ ಕೆಲವು ಹಿರಿಯ ಅಧಿಕಾರಿಗಳನ್ನು ಕರೆದು ತನ್ನ ಭಯವನ್ನು ವ್ಯಕ್ತಪಡಿಸಿದ್ದಾನೆ ಎಂದು ವರದಿಯಾಗಿದೆ.
ದಾವೂದ್ ಮತ್ತು ಅವನ ಸಹಾಯಕರ ವಿರುದ್ಧ 2014 ರಿಂದ ಮೋದಿ ಸರಕಾರವು ತೆಗೆದುಕೊಂಡ ಕ್ರಮಗಳು ಮತ್ತು ಅವರನ್ನು ಬೆನ್ನುಬಿಡದೇ ಹುಡುಕುತ್ತಿರುವುದನ್ನು ಗುಪ್ತಚರ ಮೂಲಗಳು ತಿಳಿಸಿವೆ. ಎನ್ಡಿಎ ಸರಕಾರದ ಅಂತ್ಯವನ್ನು ನೋಡಲು ಬಯಸುತ್ತಿದ್ದ ದಾವೂದ್, ಚುನಾವಣಾ ಫಲಿತಾಂಶಗಳನ್ನು ನೋಡುತ್ತಿದ್ದಂತೆಯೇ ಐಎಸ್ಐ ಅಧಿಕಾರಿಗಳಿಗೆ ಕರೆ ಮಾಡಿ ಭಾರತೀಯ ಭದ್ರತಾ ಏಜೆನ್ಸಿಗಳಿಂದ ತನ್ನನ್ನು ರಕ್ಷಿಸುವಂತೆ ಕೇಳಿಕೊಂಡಿದ್ದಾನೆ ಎಂದು ವರದಿಯಾಗಿದೆ. ಪ್ರಧಾನಿ ಮೋದಿ ಮತ್ತು ಅವರ ನಾಯಕತ್ವದಲ್ಲಿ ಅಮೆರಿಕ ಮತ್ತು ಇಸ್ರೇಲ್ನೊಂದಿಗೆ ಭಾರತದಲ್ಲಿ ಬೆಳೆಯುತ್ತಿರುವ ರಕ್ಷಣಾ ಮತ್ತು ಭದ್ರತಾ ಕಾರ್ಯಗಳ ಬಗ್ಗೆ ದಾವೂದ್ ತನ್ನ ಜೀವಭಯ ವ್ಯಕ್ತಪಡಿಸಿದ್ದಾನೆ.
ಪ್ರಧಾನಿ ಮೋದಿ ಅವರು ದಾವೂದ್ನನ್ನು ಹೇಗಾದರೂ ಮಾಡಿ ಭಾರತಕ್ಕೆ ಹಿಂತಿರುಗುವಂತೆ ಮಾಡುತ್ತಾರೆ ಎಂದು ದಾವೂದ್ ಭಯಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ. ಅಮೆರಿಕಾದ ಸಿಐಎ ಮತ್ತು ಇಸ್ರೇಲ್ನ ಮೊಸಾದ್ ಗುಪ್ತಚರ ಸಂಸ್ಥೆಗಳು ಕೂಡ ದಾವೂದ್ನನ್ನು ಬಂಧಿಸಲು ಸಹಾಯ ಮಾಡುತ್ತಿರುವುದರಿಂದ ಅವನ ಆತಂಕಗಳು ದ್ವಿಗುಣಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.