ನವದೆಹಲಿ: ಚುನಾವಣಾ ಫಲಿತಾಂಶ ದಿನಾಂಕ ಹತ್ತಿರವಾಗುತ್ತಿದ್ದಂತೆ ಪ್ರತಿಪಕ್ಷಗಳು ಇವಿಎಂಗಳ ಮೇಲಿನ ಆರೋಪವನ್ನು ಮತ್ತಷ್ಟು ತೀವ್ರಗೊಳಿಸಿವೆ. ಇವಿಎಂ ಮತ್ತು ವಿವಿಪ್ಯಾಟ್ ಅನ್ನು ದುರುಪಯೋಗಪಡಿಸಿಕೊಂಡು ಚುನಾವಣಾ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಲಾಗಿದೆ ಎಂದು ಇವುಗಳು ಆರೋಪಿಸುತ್ತಿವೆ. ಆದರೆ ಚುನಾವಣಾ ಆಯೋಗ ಈ ಆರೋಪವನ್ನು ನಿರಾಕರಿಸಿದ್ದು, ಸತ್ಯಕ್ಕೆ ದೂರವಾದುದು ಎಂದಿದೆ.
“ಎಲ್ಲಾ ಕಡೆಯೂ ಇವಿಎಂ ಮತ್ತು ವಿವಿಪ್ಯಾಟ್ಗಳನ್ನು ಆಯಾ ಪಕ್ಷಗಳ ಸಮ್ಮುಖದಲ್ಲೇ ಸೀಲ್ ಮಾಡಲಾಗಿದೆ. ಈ ವೇಳೆ ಸಿಸಿ ಕ್ಯಾಮೆರಾ, ವಿಡಿಯೋಗ್ರಫಿಯನ್ನು ಅಳವಡಿಸಲಾಗಿತ್ತು, ಸಿಎಪಿಎಫ್ ಭದ್ರತೆಯನ್ನು ನಿಯೋಜನೆಗೊಳಿಸಲಾಗಿತ್ತು. ಆ ಸಮಯದಲ್ಲಿ ಪಕ್ಷಗಳಿಗೆ ಸ್ಟ್ರಾಂಗ್ ರೂಮ್ಗಳನ್ನು ನೋಡುವ ಅವಕಾಶ ನೀಡಲಾಗಿತ್ತು. ಪ್ರತಿ ಪಕ್ಷಗಳ ಎಲ್ಲಾ ಆರೋಪವೂ ನಿರಾಧಾರ” ಎಂದಿದೆ.
ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಇವಿಎಂಗಳನ್ನು ಅದಲು ಬದಲು ಮಾಡಲಾಗಿದೆ, ಬಿಜೆಪಿಗೆ ಸಹಾಯಕವಾಗಲಿ ಎಂಬ ಕಾರಣಕ್ಕೆ ಹೀಗೆ ಮಾಡಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಆದರೆ ಚುನಾವಣಾ ಆಯೋಗ ಈ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿದೆ.
ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದ ಬಳಿಕ ಸೋಲುವುದು ಖಚಿತವೆಂದು ತಿಳಿದುಕೊಂಡಿರುವ ಪ್ರತಿಪಕ್ಷಗಳು ಮತಯಂತ್ರಗಳ ಮೇಲಿನ ಆರೋಪವನ್ನು ತೀಕ್ಷ್ಣಗೊಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.