ಬೆಂಗಳೂರು : ಡಿ-ನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಒಂದಾದ ಮೇಲೊಂದರಂತೆ ಎಫ್ಐಆರ್ ದಾಖಲಾಗಿದೆ, ಆದರೆ ಕ್ರಿಮಿನಲ್ ಪ್ರಕರಣಗಳಲ್ಲಿ ಎಫ್.ಐ.ಆರ್ನ್ನು ನೇರವಾಗಿ ದಾಖಲಿಸಲು ಲೋಕಾಯುಕ್ತಕ್ಕೆ ಅಧಿಕಾರವಿಲ್ಲ. ಹೀಗಾಗಿ ಯಡಿಯೂರಪ್ಪ ಪ್ರಕರಣದಲ್ಲಿ ಕಾನೂನು ಉಲ್ಲಂಘನೆಯಾಗಿದೆ ಎಂದು ತಿಳಿದು ಬಂದಿದೆ.
ಸಿ.ಎ.ಜಿ ವರದಿಯ ಆಧಾರದಲ್ಲಿ ಬಿ.ಎಸ್.ವೈ ವಿರುದ್ಧ ಈ ದೂರುಗಳನ್ನು ದಾಖಲಿಸಲಾಗಿದೆ. ಆದರೆ ವರದಿಯು ಸದನದಲ್ಲಿ ಮಂಡನೆಯಾಗಿ, ಅದು ವರದಿಯಲ್ಲಿರುವ ವ್ಯಕ್ತಿಯ ವಿರುದ್ಧ ದಾವೆ ಹೂಡಲು ಶಿಫಾರಸ್ಸು ಮಾಡಿದರೆ ಮಾತ್ರ ಎಫ್.ಐ.ಆರ್ ದಾಖಲಿಸಬಹುದು.
ದೂರು ದಾಖಲಿಸಲು ಸಕ್ಷಮ ಪ್ರಾಧಿಕಾರದ ಅನುಮತಿ ಅಗತ್ಯವಾಗಿದು ಈ ಪ್ರಕರಣದಲ್ಲಿ ರಾಜ್ಯಪಾಲರು ಸಕ್ಷಮ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುದರಿಂದ ಅವರ ಅನುಮತಿ ಪಡೆಯದೆ ಪ್ರಕರಣವನ್ನು ದಾಖಲುಮಾಡಲಾಗಿದೆ. ಅಲ್ಲದೇ ಸಿ.ಐ.ಡಿ ಗೆ ವಹಿಸಲಾಗಿದೆ.
ಸಿ.ಎ.ಜಿ ವರದಿ ಆಧರಿಸಿ ದೂರನ್ನು ಖಾಸಗಿ ವ್ಯಕ್ತಿಗಳು ದಾಖಲಿಸುವಂತಿಲ್ಲ. ಅಲ್ಲದೇ ಪ್ರಕರಣವನ್ನು ದಾಖಲಿಸಲು ಸಿ.ಎ.ಜಿ ವರದಿಯೇ ಅಂತಿಮ ಎಂದು ಅದನ್ನೇ ಆಧಾರವಾಗಿರಿಸಿ ದೂರನ್ನು ದಾಖಲಿಸಲಾದುದಿಲ್ಲವೆಂದು ಸುಪ್ರೀಂಕೋರ್ಟ್ ಹಲವು ಬಾರಿ ಹೇಳಿದೆ.
1995-2012ರವರಗೆ ಸಿ.ಎ.ಜಿ.ಗೆ ವರದಿ ನೀಡಬೇಕೆಂದು ಆದೇಶಿಸಿದ್ದರೂ ಕೇವಲ ಯಡಿಯೂರಪ್ಪ ಅವರ ಕಾಲಾವಧಿಯ ಪ್ರಕರಣವನ್ನು ಪರಿಶೀಲಿಸಿ ವರದಿ ನೀಡಿದೆ ಅದಕ್ಕಿಂತ ಮುಂಚಿನ ಅವಧಿಯ ಪ್ರಕರಣಗಳಗೆ ಯಾವುದೇ ವಿಚಾರಣೆ ನಡೆಯದಿರವುದು ರಾಜಕೀಯ ನಡೆಯಂತೆ ಕಾಣಿಸುತ್ತಿದೆ.
ಈ ಹಿಂದೆ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅಂದಿನ ರಾಜ್ಯಪಾಲ ರಾಮೇಶ್ವರ ಠಾಕೂರ್ ಅದೇಶದ ಮೇರೆಗೆ ಧರ್ಮಸಿಂಗ್ ಮೇಲಿರುವ ಆರೋಪವನ್ನು ಕೈಬಿಟ್ಟಿದ್ದು ನೆನಪಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.