ನವದೆಹಲಿ: ಮೇ 21 ರಂದು ಭಯೋತ್ಪಾದನಾ ವಿರೋಧಿ ದಿನವನ್ನಾಗಿ ಆಚರಿಸುವಂತೆ ಯುಜಿಸಿ (ಯೂನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್) ತನ್ನ ಅಧೀನದಲ್ಲಿರುವ ಎಲ್ಲಾ ವಿಶ್ವವಿದ್ಯಾಲಯ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನಿಡಿದೆ.
ಪ್ರತಿ ವರ್ಷ ಮೇ 21 ನ್ನು ಭಾರತದಲ್ಲಿ ಭಯೋತ್ಪಾದನಾ ವಿರೋಧಿ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಯುವಜನತೆಯನ್ನು ಭಯೋತ್ಪಾದನೆಯಿಂದ ಮತ್ತು ಹಿಂಸಾಚಾರದಿಂದ ದೂರವಿರಿಸಲು ಈ ದಿನವನ್ನು ಆಚರಣೆ ಮಾಡುವಂತೆ ಕುಲಪತಿಗಳಿಗೆ ಬರೆದ ಪತ್ರದಲ್ಲಿ ಯುಜಿಸಿ ಹೇಳಿದೆ.
ಈ ದಿನದ ಅಂಗವಾಗಿ ಚರ್ಚಾ ಕಾರ್ಯಕ್ರಮ, ಸಂವಾದ, ಪ್ರತಿಜ್ಞೆ ಸ್ವೀಕಾರ ಸಮಾರಂಭ, ಫಿಲ್ಮ್ ಸ್ಕ್ರೀನಿಂಗ್ಗಳನ್ನು ಆಯೋಜನೆಗೊಳಿಸುವಂತೆ ಅದು ಹೇಳಿದೆ.
1991 ರಂದು ಎಲ್ಟಿಟಿ ಸಂಘಟನೆಯ ಆತ್ಮಾಹುತಿ ದಾಳಿಯಿಂದ ಮೃತರಾದ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧೀ ಅವರ ಸ್ಮರಣಾರ್ಥ ಪ್ರತಿವರ್ಷ ಮೇ 21 ರಂದು ಭಯೋತ್ಪಾದನಾ ವಿರೋಧಿ ದಿನವನ್ನು ಆಚರಣೆ ಮಾಡಲಾಗುತ್ತದೆ.
“ನಿಮ್ಮ ವಿಶ್ವವಿದ್ಯಾನಿಲಯದಲ್ಲಿ ಮತ್ತು ನಿಮ್ಮ ಅಂಗಸಂಸ್ಥೆ ಕಾಲೇಜುಗಳಲ್ಲಿ 2019ರ ಮೇ 21ರಂದು ‘ಭಯೋತ್ಪಾದನಾ ವಿರೋಧಿ ದಿನ’ವನ್ನು ಆಚರಿಸಿ ಎಂದು ಕೋರುತ್ತೇವೆ. ಆ ದಿನ ಗೃಹ ಸಚಿವಾಲಯ ಸೂಚಿಸಿದ ಸೂಕ್ತ ಕಾರ್ಯಕ್ರಮಗಳನ್ನು ನೀವು ಆಯೋಜನೆಗೊಳಿಸಬೇಕು’ ಎಂದು ಯುಜಿಸಿ ಪತ್ರದಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.