ಕುಲು: ಹಿಮಾಚಲ ಪ್ರದೇಶದ 13,050 ಅಡಿ ಎತ್ತರದಲ್ಲಿರುವ ರೊಹ್ಟಂಗ್ ಪಾಸ್ ಅನ್ನು ಸೋಮವಾರ ಸಣ್ಣ ವಾಹನಗಳ ಸಂಚಾರಕ್ಕಾಗಿ ಬಾರ್ಡರ್ ರೋಡ್ ಆರ್ಗನೈಝೇಶನ್ ತೆರೆದಿದೆ. ಇದರಿಂದಾಗಿ ಹಿಮಾಚಲಪ್ರದೇಶದ ಬುಡಕಟ್ಟು ಜಿಲ್ಲೆಯಾದ ಲಹೌಲ್ ಸ್ಪಿತಿ ನಿವಾಸಿಗಳಿಗೆ ದೊಡ್ಡ ನಿರಾಳತೆ ಸಿಕ್ಕಿದೆ.
ರೋಹ್ಟಂಗ್ ಪಾಸ್, ಲಹೌಲದ ಮನಾಲಿ-ಲೇಹ್ ಹೆದ್ದಾರಿ ಮೂಲಕದ ಗೇಟ್ ವೇ ಆಗಿದೆ. ಚಳಿಗಾಲದ ಸಂದರ್ಭದಲ್ಲಿ ಇದು ಭಾರೀ ಪ್ರಮಾಣದಲ್ಲಿ ಹಿಮಪಾತವನ್ನು ಕಾಣುತ್ತದೆ. ಇದರಿಂದಾಗಿ ಲಹೌಲದ ನಿವಾಸಿಗಳಿಗೆ ರಾಜ್ಯದ ವಿವಿಧ ಭಾಗಗಳೊಂದಿಗೆ ಹಲವಾರು ತಿಂಗಳುಗಳ ಕಾಲ ಸಂಪೂರ್ಣ ಸಂಪರ್ಕವನ್ನು ಕಡಿದುಕೊಳ್ಳಬೇಕಾಗುತ್ತದೆ.
“ರೊಹ್ಟಂಗ್ ಪಾಸ್ ಅನ್ನು ಸಣ್ಣ ವಾಹನಗಳ ಮತ್ತು ಲಹೌಲ ನಿವಾಸಿಗಳ ವಾಹನಗಳ ಸಂಚಾರಕ್ಕಾಗಿ ಮರು ತೆರೆಯಲಾಗಿದೆ” ಎಂದು ಕುಲುವಿನ ಡಿಪ್ಯೂಟಿ ಕಮಿಷನರ್ ಯುನಸ್ ಹೇಳಿದ್ದಾರೆ.
ಆದರೆ ರೊಹ್ಟಂಗ್ ಪಾಸ್ ಅನ್ನು ಇದುವರೆಗೆ ಪ್ರವಾಸಿಗರಿಗೆ ತೆರೆಯಲಾಗಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.
ಬಾರ್ಡರ್ ರೋಡ್ ಆರ್ಗನೈಝೇಶನ್ ಸಿಂಗಲ್ ಲೇನ್ನಲ್ಲಿನ ಎಲ್ಲಾ ಹಿಮಗಳನ್ನು ತೆಗೆದು ಹಾಕಿದ್ದಾರೆ, ಡಬಲ್ ಲೇನ್ ಹಿಮವನ್ನು ತೆಗೆಯುವ ಕಾರ್ಯವನ್ನು ಆರಂಭಿಸುತ್ತಿದ್ದಾರೆ ಎಂದಿರುವ ಯುನಸ್, ತುರ್ತು ಪರಿಸ್ಥಿತಿಯಿದ್ದರೆ ಜನರು ಸೇನೆಯ ಸಣ್ಣ ವಾಹನದ ನೆರವು ಪಡೆಯಬಹುದು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.