ನವದೆಹಲಿ: 49 ವರ್ಷದ ಕಮಿ ರಿತ ಶೆರ್ಪಾ ಅವರು 24 ನೇ ಬಾರಿಗೆ ಮೌಂಟ್ ಎವರೆಸ್ಟ್ ತುತ್ತತುದಿಯನ್ನು ಏರುವ ಮೂಲಕ ಹೊಸ ದಾಖಲೆಯನ್ನು ನಿರ್ಮಾಣ ಮಾಡಿದ್ದಾರೆ. ಮೇ 15 ರಂದು ಅವರು 24 ನೇ ಬಾರಿಗೆ ವಿಶ್ವದ ಅತೀ ಎತ್ತರದ ಶಿಖರ ಎವರೆಸ್ಟ್ ತುದಿಯನ್ನು ಏರಿದ್ದಾರೆ.
ಈ ಸಾಧನೆಯನ್ನು ಮಾಡುವ ಮೂಲಕ ಶೆರ್ಪಾ ಅವರು ಅತೀ ಹೆಚ್ಚು ಬಾರಿ ಎವರೆಸ್ಟ್ ಶಿಖರವನ್ನೇರಿದ ವಿಶ್ವದ ಮೊತ್ತ ಮೊದಲ ಪರ್ವತಾರೋಹಿ ಎನಿಸಿಕೊಂಡಿದ್ದಾರೆ.
ನೇಪಾಳ ಮಾರ್ಗವಾಗಿ ಎವರೆಸ್ಟ್ ಹತ್ತಿದ ಅವರು ಮೇ 15 ರಂದು ಬೆಳಿಗ್ಗೆ 1.30ರ ಸುಮಾರಿಗೆ ತುತ್ತ ತುದಿಯನ್ನು ಏರಿದ್ದಾರೆ.
ಈಗಾಗಲೇ ಶೆರ್ಪಾ ಅವರು ಕಾಂಚನಜುಂಗಾ, ಚೊ-ಒಯು, Lhoste, ಅನ್ನಪೂರ್ಣ ಮುಂತಾದ ಶಿಖರಗಳನ್ನು ಏರಿದ್ದಾರೆ.
ಮೊದಲ ಬಾರಿಗೆ ಇವರು 1994ರಲ್ಲಿ ಮೌಂಟ್ ಎವರೆಸ್ಟ್ ಶಿಖರವನ್ನೇರಿದ್ದರು. ಅಲ್ಲಿಂದ ಇಲ್ಲಿಯವರೆಗೆ ಕೇವಲ 25 ವರ್ಷದಲ್ಲಿ ಅವರು 24 ಬಾರಿ ಮೌಂಟ್ ಎವರೆಸ್ಟ್ ಹತ್ತಿದ ಸಾಧನೆಯನ್ನು ಮಾಡಿದ್ದಾರೆ. ಇನ್ನೂ ಎರಡು ಮೂರು ಶಿಖರವನ್ನೇರುವ ಗುರಿ ಅವರದ್ದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.