ರಾಯ್ಪುರ: 10ನೇ ತರಗತಿಯಲ್ಲಿ, 12ನೇ ತರಗತಿಯಲ್ಲಿ ಫೇಲ್ ಆದೆ ಎಂದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುವಂತಹ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬುವ ಸಲುವಾಗಿ ಛತ್ತೀಸ್ಗಢದ ಐಪಿಎಸ್ ಅಧಿಕಾರಿಯೊಬ್ಬರು ತಮ್ಮ 10 ಮತ್ತು 12ನೇ ತರಗತಿ ರಿಪೋರ್ಟ್ ಕಾರ್ಡ್ ಅನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. ಸಾಮಾನ್ಯ ಅಂಕಗಳನ್ನು ಪಡೆದುಕೊಂಡಿದ್ದ ನಾನು ಭಾರತೀಯ ಆಡಳಿತಾತ್ಮಕ ಸೇವೆಯಂತಹ ಅತ್ಯಂತ ಕಠಿಣ ಪರೀಕ್ಷೆಯಲ್ಲಿ ಪಾಸಾಗಿ ಇಂದು ಐಎಎಸ್ ಅಧಿಕಾರಿ ಆಗಿದ್ದೇನೆ. ಪರೀಕ್ಷೆಯಲ್ಲಿ ಫೇಲ್ ಆಗುವುದು ಜೀವನದ ಅಂತ್ಯವಲ್ಲ ಎಂದು ಅವರು ಕಿವಿಮಾತು ಹೇಳಿದ್ದಾರೆ.
ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು, ಕಡಿಮೆ ಅಂಕ ಬಂತೆಂದು ಬೇಸರ ಪಟ್ಟುಕೊಂಡು ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ಪ್ರತಿ ಸೋಲು ಕೂಡ ಗೆಲುವಿನ ಆರಂಭವಾಗಿರುತ್ತದೆ ಎಂದು ಅವರು ಅರ್ಥಪೂರ್ಣ ಸಂದೇಶವನ್ನು ಮಕ್ಕಳಿಗೆ ರವಾನಿಸಿದ್ದಾರೆ.
“ಕಡಿಮೆ ಅಂಕ ಬಂತೆಂದು ಒಬ್ಬ ಹುಡುಗ ಆತ್ಮಹತ್ಯೆ ಮಾಡಿಕೊಂಡ ಸುದ್ದಿಯನ್ನು ಪತ್ರಿಕೆಯಲ್ಲಿ ಓದಿ ಶಾಕ್ ಆಯಿತು. ಫಲಿತಾಂಶಗಳನ್ನು ಗಂಭೀರವಾಗಿ ಪರಿಗಣಿಸದಂತೆ ನಾನು ಮಕ್ಕಳು ಮತ್ತು ಪೋಷಕರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಫಲಿತಾಂಶ ಕೇವಲ ಸಂಖ್ಯೆಗಳ ಆಟವಷ್ಟೇ. ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಜೀವನದಲ್ಲಿ ಹಲವಾರು ಅವಕಾಶಗಳನ್ನು ನೀವು ಪಡೆದುಕೊಳ್ಳುತ್ತೀರಿ. ಮುಂದಕ್ಕೆ ಚಲಿಸುತ್ತಲೇ ಇರಿ. ನಾನು ನನ್ನ ರಿಪೋರ್ಟ್ ಕಾರ್ಡ್ ಅನ್ನು ಇಲ್ಲಿ ಹಂಚಿಕೊಂಡಿದ್ದೇನೆ” ಎಂದು ಅವರು ಪೋಸ್ಟ್ ಹಾಕಿದ್ದಾರೆ.
ಛತ್ತೀಸ್ಗಢ ಬೋರ್ಡ್ ಎಕ್ಸಾಂ ಫಲಿತಾಂಶಗಳು ಮೇ 14ರಂದು ಪ್ರಕಟಗೊಂಡಿರುವ ಹಿನ್ನಲೆಯಲ್ಲಿ ಅವನೀಶ್ ಅವರು ತಮ್ಮ 10 ಮತ್ತು 12ನೇ ತರಗತಿಯ ರಿಪೋರ್ಟ್ ಕಾರ್ಡ್ ಹಂಚಿಕೊಂಡಿದ್ದಾರೆ. ಎರಡೂ ಪರೀಕ್ಷೆಯಲ್ಲೂ ಅವರು ಸಾಧಾರಣ ಅಂಕದ ಮೂಲಕ ತೇರ್ಗಡೆಯಾಗಿದ್ದಾರೆ.
ತನ್ನದೇ ಉದಾಹರಣೆಯನ್ನು ನೀಡಿ ಮಕ್ಕಳಿಗೆ ಸ್ಪೂರ್ತಿ ತುಂಬುವಂತಹ ಕಾರ್ಯ ಮಾಡಿದ ಅವನೀಶ್ ಅವರಿಗೆ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.