ನವದೆಹಲಿ: ಭಾರತದ ಮೊತ್ತ ಮೊದಲ ಬುಲೆಟ್ ರೈಲಿನ ವಿವಿಧ ಹುದ್ದೆಗಳಿಗೆ ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೋರೇಶನ್ ಲಿಮಿಟೆಡ್ (NHSRCL) ಶೀಘ್ರದಲ್ಲೇ ಅರ್ಜಿ ಆಹ್ವಾನ ಮಾಡಲಿದೆ.
NHSRCL ಶೀಘ್ರದಲ್ಲೇ 13 ಮಿಡ್ಲ್ ಲೆವೆಲ್ ಮ್ಯಾನೇಜ್ಮೆಂಟ್ ಹುದ್ದೆಗಳಲ್ಲಿ ನೇಮಕಾತಿ ಮಾಡುವ ಜಾಹೀರಾತನ್ನು ಬಿಡುಗಡೆಗೊಳಿಸಲಿದೆ. ಇದು ಸ್ಟೇಶನ್ ಆಪರೇಶನ್, ಟ್ರೈನ್ ಆಪರೇಶನ್, ರೋಲಿಂಗ್ ಸ್ಟಾಕ್, ಸಿಗ್ನಲಿಂಗ್, ಟೆಲಿಕಮ್ಯೂನಿಕೇಶನ್, ಎಲೆಕ್ಟ್ರಿಕಲ್ ಮತ್ತು ಟ್ರ್ಯಾಕ್ ಸಂಬಂಧಿತ ಇಲಾಖೆಗಳನ್ನು ಒಳಗೊಂಡಿದೆ. ಈ ಹುದ್ದೆಗಳನ್ನು ಒಂದು ಬಾರಿ ಭರ್ತಿ ಮಾಡಿದರೆ, ಬಳಿಕ ಬುಲೆಟ್ ಟ್ರೈನ್ ಚಾಲಕರಿಗಾಗಿ ಅರ್ಜಿಯನ್ನು ಆಹ್ವಾನ ಮಾಡಲಾಗುತ್ತದೆ. ಈ ಹಣಕಾಸು ವರ್ಷದಲ್ಲಿ 28 ಚಾಲಕರನ್ನು ನೇಮಕ ಮಾಡುವ ಗುರಿಯನ್ನು ಹೊಂದಲಾಗಿದೆ.
NHSRCL ವೆಬ್ಸೈಟ್ ಪ್ರಕಾರ, ಬುಧವಾರದಿಂದ ಮೊದಲ ಬ್ಯಾಚಿನ ಓಪನಿಂಗ್ ಆರಂಭಗೊಳ್ಳಲಿದೆ.
NHSRCL ಕೇಂದ್ರ ಸರ್ಕಾರ ಮತ್ತು ಭಾಗಿದಾರಿ ರಾಜ್ಯ ಸರ್ಕಾರಗಳ ಜಂಟಿ ಸಹಭಾಗಿತ್ವವಾಗಿದ್ದು, ದೇಶದಲ್ಲಿ ಹೈಸ್ಪೀಡ್ ರೈಲ್ ಯೋಜನೆಯನ್ನು ಕಾರ್ಯಗತಗೊಳಿಸುವ ಸಲುವಾಗಿ ರಚನೆ ಮಾಡಲಾಗಿದೆ. ಮುಂಬಯಿ ಮತ್ತು ಅಹ್ಮದಾಬಾದ್ ನಡುವೆ ಸಂಚರಿಸಲಿರುವ ದೇಶದ ಮೊದಲ ಬುಲೆಟ್ ರೈಲಿನ ಜವಾಬ್ದಾರಿಯನ್ನೂ ಇದು ಹೊತ್ತುಕೊಂಡಿದೆ. ಈ ಯೋಜನೆಗೆ ತಗಲುವ ಒಟ್ಟು ವೆಚ್ಚ ರೂ. 1.10 ಟ್ರಿಲಿಯನ್ ಆಗಿದ್ದು, ರೂ. 88 ಸಾವಿರ ಕೋಟಿಯನ್ನು ಜಪಾನಿನಿಂದ ಸಾಲವಾಗಿ ಪಡೆಯಲಾಗಿದೆ. ಶೇ.0.1 ಬಡ್ಡಿದರದಲ್ಲಿ 50 ವರ್ಷಗಳೊಳಗೆ ಹಿಂದಿರುಗಿಸಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.