ಮಂಗಳೂರು: 1200 ರುಬಿಕ್ಸ್ ಕ್ಯೂಬ್ಗಳನ್ನು ಬಳಸಿ ಮೊಸೈಕ್ನಲ್ಲಿ ಹುಲಿಯನ್ನು ಯಶಸ್ವಿಯಾಗಿ ರಚನೆ ಮಾಡಿದ ಮಂಗಳೂರಿಗರ ತಂಡ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಸೇರುವ ಹಾದಿಯಲ್ಲಿದೆ. 293 ಕ್ಯೂಬರ್ಗಳ ತಂಡ ಈ ಹುಲಿಯ ಮೊಸೈಕ್ ಅನ್ನು ರಚನೆ ಮಾಡಿದ್ದು, ಗಿನ್ನಿಸ್ ಅಧಿಕಾರಿಗಳ ಅಂತಿಮ ಅನುಮೋದನೆಯನ್ನು ಪಡೆಯಲು ಕಾಯುತ್ತಿದೆ.
ಮಂಗಳೂರಿನ ಪ್ರಿತ್ವೀಶ್ ಕೆ ಅವರ ‘ಪೃಥ್ವಿ ಮೊಸೈಕ್ಸ್’ ತಂಡವು ‘ರುಬಿಕ್ಸ್ ಕ್ಯೂಬ್ ಮೊಸೈಕ್ಗೆ ಅತ್ಯುತ್ತಮ ಕೊಡುಗೆ’ ಎಂಬ ಶೀರ್ಷಿಕೆಯನ್ನು ಪಡೆದುಕೊಳ್ಳಲಿದೆ. ಇದು ಗಿನ್ನಿಸ್ ದಾಖಲೆಗೆ ಹೊಸ ಟೈಟಲ್ ಆಗಲಿದೆ. ಮೇ 5ರಂದು ಬನ್ನೇರುಘಟ್ಟದಲ್ಲಿ ಈ ತಂಡವು ಈ ಪ್ರಯತ್ನವನ್ನು ಮಾಡಿತ್ತು.
ಗಿನ್ನಿಸ್ ದಾಖಲೆಯ ಪ್ರಯತ್ನದ ವಿವರವನ್ನು ಈಗಾಗಲೇ ಗಿನ್ನಿಸ್ ಅಧಿಕಾರಿಗಳಿಗೆ ಕಳುಹಿಸಿಕೊಟ್ಟಿದ್ದೇವೆ. ಅವರ ಅಂತಿಮ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ ಎಂದು ಪೃಥ್ವೀಶ್ ಹೇಳಿದ್ದಾರೆ.
ರುಬಿಕ್ಸ್ ಕ್ಯೂಬ್ ಮೊಸೈಕ್ಗೆ ಕೊಡುಗೆಯನ್ನು ನೀಡುವ ಸಲುವಾಗಿ 251 ಮಂದಿಯ ತಂಡವು 1200 ರುಬಿಕ್ಸ್ ಕ್ಯೂಬ್ಗಳನ್ನು ಬಳಸಿ ಹುಲಿಯ ರಚನೆಯನ್ನು ಮಾಡಿತ್ತು. ಹುಲಿ ಸಂರಕ್ಷಣೆ ಜಾಗೃತಿಯನ್ನು ಪಸರಿಸುವ ಸಲುವಾಗಿ ಹುಲಿಯ ರಚನೆಯನ್ನು ಮಾಡಲಾಗಿದೆ. ಇದನ್ನು ತಯಾರಿಸುವ ಸಂಪೂರ್ಣ ದೃಶ್ಯವನ್ನು ಚಿತ್ರೀಕರಣ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.