ಬೆಂಗಳೂರು: ಮುಂದಿನ ಎರಡು ವರ್ಷದಲ್ಲಿ ಬೆಂಗಳೂರು ನಗರವು ಅತ್ಯಂತ ಸಮರ್ಥ ಸಾರಿಗೆ ನಿರ್ವಹಣೆ ವ್ಯವಸ್ಥೆಯನ್ನು ಹೊಂದಲಿದೆ. ಜಪಾನೀಸ್ ತಂತ್ರಜ್ಞಾನ ಆಧಾರಿತ ಸಾರಿಗೆ ನಿರ್ವಹಣೆಯನ್ನು ಇಲ್ಲಿ ಪರಿಚಯಿಸಲಾಗುತ್ತಿದೆ. ‘ಸುಧಾರಿತ ಸಾರಿಗೆ ಮಾಹಿತಿ ಮತ್ತು ನಿರ್ವಹಣಾ ವ್ಯವಸ್ಥೆ’ಯ ಅನುಷ್ಠಾನಕ್ಕೆ ಜಪಾನಿನ ಇಂಟರ್ನ್ಯಾಷನಲ್ ಕೋ-ಅಪರೇಶನ್ ಏಜೆನ್ಸಿ (JICA) ಹೂಡಿಕೆ ಮಾಡಲಿದೆ. ರಾಜ್ಯ ಸರ್ಕಾರ ಇದಕ್ಕೆ ಅನುಮೋದನೆಯನ್ನು ನೀಡಿದೆ.
ಸುಧಾರಿತ ಸಾರಿಗೆ ಮಾಹಿತಿ ಮತ್ತು ನಿರ್ವಹಣಾ ವ್ಯವಸ್ಥೆಯ ಅನುಷ್ಠಾನಕ್ಕೆ JICA ಸುಮಾರು ರೂ.72.86 ಕೋಟಿಗಳನ್ನು ಹೂಡಿಕೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಈ ನಿಟ್ಟಿನಲ್ಲಿ 2018ರ ಜನವರಿ 24 ರಂದು ಜಪಾನ್ ಸರ್ಕಾರ ಮತ್ತು ಭಾರತ ಸರ್ಕಾರದ ನಡುವೆ ಒಪ್ಪಂದ ಏರ್ಪಟ್ಟಿದೆ.
2019ರ ಫೆಬ್ರವರಿಯಿಂದ ಒಂದು ವರ್ಷದ ಒಳಗಾಗಿ ಯೋಜನೆಯನ್ನು ಪೂರ್ಣಗೊಳಿಸುವುದಾಗಿ, 2020ರ ಅಕ್ಟೋಬರ್ ತಿಂಗಳಿನಿಂದ ಇದು ಕಾರ್ಯಾರಂಭ ಮಾಡಲಿದೆ ಎಂಬುದಾಗಿ ತಿಳಿದು ಬಂದಿದೆ. ಅನುಷ್ಠಾನಕ್ಕೆ ಜಪಾನ್ ಬಂಡವಾಳ ಹೂಡಿದರೆ, ಭಾರತ ಸರ್ಕಾರವು 5 ವರ್ಷಗಳ ನಿರ್ವಹಣೆಗೆ ಬಂಡವಾಳ ಹೂಡಲಿದೆ.
JICAನ ಇಂಟೆಲಿಜೆಂಟ್ ಟ್ರಾನ್ಸ್ಪೋರ್ಟ್ ವ್ಯವಸ್ಥೆಯು ಕಾಂಬೋಡಿಯಾ, ಮಯನ್ಮಾರ್ ಮತ್ತು ಥಾಯ್ಲೆಂಡ್ನಂತಹ ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ಸಾಕಷ್ಟು ಸಹಾಯ ಮಾಡುತ್ತಿದೆ.
ಇಂಟೆಲಿಜೆಂಟ್ ಟ್ರಾನ್ಸ್ಪೋರ್ಟ್ ವ್ಯವಸ್ಥೆಯನ್ನು ಬೆಂಗಳೂರಿನ ಎಂಜಿ ರೋಡ್, ಹಳೆಯ ಮದ್ರಾಸ್ ರೋಡ್, ಹೊಸೂರ್ ರಸ್ತೆಗಳಲ್ಲಿ ಅಳವಡಿಸಲಾಗುತ್ತುದೆ. ಇದು ಅತ್ಯಂತ ಸಮರ್ಥ ಸಿಗ್ನಲ್ ನೀಡುವ ಮೂಲಕ ಸಾರಿಗೆ ದಟ್ಟಣೆಯನ್ನು ನಿಯಂತ್ರಣ ಮಾಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.