News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಶೀಘ್ರದಲ್ಲೇ ನಿರ್ಮಾಣವಾಗಲಿದೆ ಎಪಿಜೆ ಕಲಾಂ ಜೀವನಾಧಾರಿತ ಸಿನಿಮಾ

ನವದೆಹಲಿ: ದೇಶ ಕಂಡ ಮಹಾನ್ ವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂ ಅವರ ಜೀವನಾಧಾರಿತ ಸಿನಿಮಾವನ್ನು ನಿರ್ಮಾಣ ಮಾಡಲು ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಸಜ್ಜಾಗುತ್ತಿದ್ದಾರೆ. ತೆಲುಗಿನ ಟೈಗರ್ ನಾಗೇಶ್ವರ್ ರಾವ್, ಗೂಢಾಚಾರಿ 2, ಸೀತಾ ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಅವರು, ಇದೀಗ ಕ್ಷಿಪಣಿ ಪುರುಷನ ಬಗ್ಗೆ ಸಿನಿಮಾ ಮಾಡುತ್ತಿದ್ದಾರೆ.

ಪ್ರಸ್ತುತ ಸಿನಿಮಾವು ಪೂರ್ವ ನಿರ್ಮಾಣ ಹಂತದಲ್ಲಿ ಇದೆ ಎಂದು ಅಗರ್ವಾಲ್ ಹೇಳಿದ್ದಾರೆ. ಇದಕ್ಕೆ ಬೇಕಾದ ಎಲ್ಲಾ ಅನುಮತಿಗಳನ್ನು ಕಲಾಂ ಅವರ ಕುಟುಂಬದಿಂದ ಅವರು ಪಡೆದುಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಗರ್ವಾಲ್, “ನೈಜ ಕಥೆಯನ್ನು ಆಧರಿಸಿದ ಹಲವಾರು ಸಿನಿಮಾಗಳನ್ನು ನಾವು ಮಾಡಿದ್ದೇವೆ. ಇಂತಹ ಸಿನಿಮಾಗಳ ಮೂಲಕ ನಾವು ಯುವಜನತೆಯಲ್ಲಿ ಸ್ಪೂರ್ತಿ ತುಂಬುತ್ತಿದ್ದೇವೆ. ಮಹಾತ್ಮ ಗಾಂಧೀಜಿ ಬಳಿಕ ನಮ್ಮ ಅತೀದೊಡ್ಡ ಹೀರೋ ಕಲಾಂ ಆಗಿದ್ದಾರೆ. ವಿಶ್ವದಾದ್ಯಂತ ಜನರಿಗೆ ಪ್ರೇರಣೆ ನೀಡಿದ್ದ ಮಹಾನ್ ವ್ಯಕ್ತಿತ್ವ ಕಲಾಂ ಅವರದ್ದಾಗಿದೆ” ಎಂದಿದ್ದಾರೆ.

ಸಿನಿಮಾದ ನಿರ್ದೇಶಕರು ಯಾರು ಎಂಬುದು ಇನ್ನೂ ಅಂತಿಮಗೊಂಡಿಲ್ಲ. ಪ್ರಸ್ತುತ ಅಗರ್ವಾಲ್ ಅವರು ಗೂಢಚಾರಿ 2 ಸಿನಿಮಾ ನಿರ್ಮಾಣದಲ್ಲಿ ತುಸು ಬ್ಯೂಸಿಯಾಗಿದ್ದಾರೆ. ಅದು ಮುಗಿದ ಕೂಡಲೇ ಕಲಾಂ ಪ್ರಾಜೆಕ್ಟ್ ಅನ್ನು ಅವರು ಕೈಗೆತ್ತಿಕೊಳ್ಳಲಿದ್ದಾರೆ ಎನ್ನಲಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top