ಚಿಕ್ಕಮಗಳೂರು: ಹಾಲು ನೀಡುವ ದನಗಳನ್ನು ನೋಂದಣಿ ಮಾಡಿಕೊಳ್ಳುವ ಸಲುವಾಗಿ ಚಿಕ್ಕಮಗಳೂರಿನಲ್ಲಿ ಸುಮಾರು 68,436 ಹಸುಗಳಿಗೆ ಬಾರ್ಕೋಡ್ ಹೊಂದಿರುವ ಟ್ಯಾಗ್ ಅನ್ನು ಅಳವಡಿಸಲಾಗಿದೆ.
ನ್ಯಾಷನಲ್ ಡೈರಿ ಡೆವಲಪ್ಮೆಂಟ್ ಬೋರ್ಡಿನ ‘Information Network for Animal Productivity and Health’ (INAPH) ಕಾರ್ಯಕ್ರಮದಡಿಯಲ್ಲಿ ಹಸುಗಳ ನೋಂದಣಿ ಕಾರ್ಯವನ್ನು ಮಾಡಲಾಗುತ್ತಿದೆ.
ಜಿಲ್ಲೆಯ ಸುಮಾರು 1,56,450 ಹಸುಗಳಿಗೆ ಈ ಟ್ಯಾಗ್ ಅನ್ನು ಅಳವಡಿಸುವ ಗುರಿಯನ್ನು ಹೊಂದಲಾಗಿದೆ. 2017ರ ಆಗಸ್ಟ್ 1 ರಿಂದ ಈ ಕಾರ್ಯ ಆರಂಭಗೊಂಡಿದ್ದು, ಇದುವರೆಗೆ 68,436 ಹಸುಗಳಿಗೆ ಟ್ಯಾಗ್ ಅನ್ನು ಅಳವಡಿಸಲಾಗಿದೆ.
ಈ ಟ್ಯಾಗ್ನಲ್ಲಿ ಬಾರ್ ಕೋಡ್ ಮತ್ತು ವಿಭಿನ್ನ ಗುರುತಿನ ನಂಬರ್ ಇರುತ್ತದೆ. ಇದರಲ್ಲಿ ಹಸುವಿನ ವಯಸ್ಸು, ಅದು ಹೊಂದಿರುವ ಕರುಗಳ ಸಂಖ್ಯೆ, ಅದು ಗರ್ಭಿಣಿಯಾಗುವ ನಡುವಣ ಅಂತರ, ಹಾಲಿನ ಗುಣಮಟ್ಟ, ಅದರ ಮಾಲೀಕನ ಹೆಸರು ಮತ್ತು ವಿಳಾಸವನ್ನು ಇದು ಒಳಗೊಂಡಿರುತ್ತದೆ. ಆನ್ಲೈನ್ನಲ್ಲಿ ಈ ಮಾಹಿತಿಗಳು ಸಮಯದಿಂದ ಸಮಯಕ್ಕೆ ಅಪ್ಡೇಟ್ ಆಗುತ್ತವೆ.
ಈ ಎಲ್ಲಾ ಮಾಹಿತಿಗಳನ್ನು ಆಧರಿಸಿ ಹಸುವಿನ ಮಾಲೀಕರಿಗೆ ಡೈರಿ ಡೆವಲಪ್ಮೆಂಟ್ ಬೋರ್ಡ್ ಅತ್ಯಂತ ಅವಶ್ಯಕವಾದ ಮಾಹಿತಿಗಳನ್ನು ಮೆಸೇಜ್ ಮೂಲಕ ರವಾನಿಸುತ್ತದೆ. ವಾಕ್ಸಿನೇಷನ್, ಆರೋಗ್ಯ ಸಂಬಂಧಿ ಮಾಹಿತಿಗಳನ್ನು ಇದು ಒಳಗೊಂಡಿರುತ್ತದೆ.
ಯಾವುದೇ ನೋವು ಉಂಟಾಗದ ರೀತಿಯಲ್ಲಿ ಹಸುವಿನ ಕಿವಿಗೆ ಟ್ಯಾಗ್ ಅನ್ನು ಅಳವಡಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.