ಲಕ್ನೋ: ಉತ್ತರಪ್ರದೇಶದ ರಾಜ್ಯ ಪುರಾತತ್ವ ಇಲಾಖೆಯು, ಲಕ್ನೋದಲ್ಲಿ 220 ವರ್ಷ ಹಳೆಯ ಛಾತರ್ ಮಂಝಿಲ್ ಅನ್ನು ಉತ್ಖನನ ಮಾಡಿದ ವೇಳೆ 42 ಅಡಿ ಉದ್ದದ ಮತ್ತು 11 ಅಡಿ ಅಗಲದ ಗೊಂಡಾಲ (ಸಾಂಪ್ರದಾಯಿಕ ಫ್ಲ್ಯಾಟ್ ಬಾಟಂ ದೋಣಿ)ಯನ್ನು ಪತ್ತೆ ಮಾಡಿದೆ. ಛಾತರ್ ಮಂಝಿಲ್ ಒಂದು ಕಾಲದಲ್ಲಿ ಅವಧ್ ಬೇಗಂಗಳ ಅರಮನೆಯಾಗಿತ್ತು.
ಪುರಾತತ್ವ ಇಲಾಖೆ ಅಧಿಕಾರಿಗಳ ಪ್ರಕಾರ, ಈ ದೋಣಿಯು ರಾಜರುಗಳಿಗೆ ಸೇರಿದ ದೋಣಿಯಾಗಿರಬಹುದು ಎನ್ನಲಾಗಿದೆ. ಆದರೆ ಯಾಕೆ ಈ ದೋಣಿಯನ್ನು ಮಣ್ಣಿನಡಿ ಹೂಳಲಾಯಿತು ಎಂಬ ಬಗ್ಗೆ ಇನ್ನು ಪತ್ತೆ ಮಾಡಬೇಕಷ್ಟೇ.
“ಈ ದೋಣಿಯನ್ನು ಹೂತಿರುವುದು ಈಗಲೂ ನಿಗೂಢವೇ ಆಗಿದೆ. ನೆರೆ ಅಥವಾ ಇತರ ಕಾರಣದಿಂದ ಇದು ಮಣ್ಣಿನಡಿ ಹೋಗಿರುವ ಸಾಧ್ಯತೆ ಇದೆ” ಎಂದು ಪುರಾತತ್ವ ಇಲಾಖೆ ನಿರ್ದೇಶಕ ಎಕೆ ಸಿಂಗ್ ಹೇಳಿದ್ದಾರೆ.
ಗುರುವಾರ ಮುಸ್ಸಂಜೆ ಅಧಿಕಾರಿಗಳು ಉತ್ಖನನ ನಡೆಸುತ್ತಿದ್ದ ವೇಳೆ ಮಣ್ಣಿನಲ್ಲಿ ಮರದ ತುಂಡುಗಳು ಗೋಚರಿಸಿದವು. ಬಳಿಕ ಇದನ್ನು ತೆಗೆದು ನೋಡಿದಾಗ ಅದು ಗೊಂಡಾಲ ಆಗಿತ್ತು ಎಂದಿದ್ದಾರೆ.
ಛಾತರ್ ಮಂಝಿಲ್ ಅನ್ನು ಉತ್ಖನನ ಮಾಡುವ ಪ್ರಕ್ರಿಯೆಯನ್ನು 2017ರ ಮೇ ನಿಂದಲೇ ಆರಂಭಿಸಲಾಗಿದೆ. ಈ ಹಿಂದೆ ಇಲ್ಲಿ 15 ಚದರ ಅಡಿಯ ಕೋಣೆಯೊಂದು ಅರಮನೆಯ ಕೆಳಗೆ ಪತ್ತೆಯಾಗಿತ್ತು. ಈ ಅರಮನೆ ಹಲವಾರು ವರ್ಷಗಳಿಂದ ಪಾಲು ಬಿದ್ದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.