ಪ್ರಯಾಗ್ರಾಜ್: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಫೆ. 14 ರಂದು ಸಿಆರ್ಪಿಎಫ್ ಯೋಧರ ಮೇಲೆ ನಡೆದ ದಾಳಿಗೆ ಪ್ರತಿಭಟನೆಯನ್ನು ವ್ಯಕ್ತಪಡಿಸುವ ಸಲುವಾಗಿ ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿನ ಹೋಟೆಲ್ವೊಂದು, ಪಾಕಿಸ್ಥಾನಿಯರಿಗೆ ಪ್ರವೇಶವನ್ನು ನಿರಾಕರಿಸಿದೆ.
ಹೋಟೆಲ್ ಮಿಲನ್ ಪ್ಯಾಲೇಸ್ ತನ್ನ ಪ್ರವೇಶ ದ್ವಾರದಲ್ಲಿ ‘ಪಾಕಿಸ್ಥಾನಿ ಪ್ರಜೆಗಳಿಗೆ ಪ್ರವೇಶವಿಲ್ಲ’ ಎಂದು ಸೂಚನಾ ಫಲಕವನ್ನು ಹಾಕಿದೆ.
ಪುಲ್ವಾಮ ದಾಳಿಯ ಬಳಿಕದಿಂದ ಈ ಸೂಚನಾ ಫಲಕವನ್ನು ಹೋಟೆಲ್ ಮುಂದುಗಡೆ ಹಾಕಿದ್ದೇವೆ. ದಾಳಿಯನ್ನು ಪ್ರತಿಭಟಿಸಲು ನಮಗಿದು ಏಕೈಕ ಮಾರ್ಗವಾಗಿತ್ತು ಎಂದು ಹೋಟೆಲ್ ಮಾಲೀಕರು ಹೇಳಿಕೊಂಡಿದ್ದಾರೆ. ಹೋಟೆಲ್ಗೆ ಪಾಕಿಸ್ಥಾನಿ ಪ್ರಜೆಗಳು ಬಂದರೆ ಅವರಿಗೆ ನಾವು ರೂಮ್ ನೀಡುವುದಿಲ್ಲ ಎಂದು ಇವರು ಸ್ಪಷ್ಟಪಡಿಸಿದ್ದಾರೆ.
ಪುಲ್ವಾಮ ದಾಳಿಯ ಬಳಿಕ ಪಾಕಿಸ್ಥಾನದ ಕಲಾವಿದರಿಗೆ ಭಾರತದಲ್ಲಿ ನಿಷೇಧ ಹೇರಲಾಯಿತು. ಭಾರತದ ರೈತರೂ ಆ ದೇಶಕ್ಕೆ ಟೊಮ್ಯಾಟೋ ಪೂರೈಕೆ ಮಾಡುವುದಿಲ್ಲ ಎಂದು ಘೋಷಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.