ಜಲ್ಪೈಗುರಿ: ಪಶ್ಚಿಮ ಬಂಗಾಳದ ಬೇಲಕೊಬ ಅರಣ್ಯ ಇಲಾಖೆಯಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು 100 ಕೋ.ರೂ. ಮೌಲ್ಯದ ಹಾವಿನ ವಿಷವನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅರಣ್ಯ ಇಲಾಖೆ ರೇಂಜರ್ ಸಂಜಯ್ ದತ್ತ ತಿಳಿಸಿದ್ದಾರೆ.
ಕಾಲೇಜು ಬ್ಯಾಗ್ನಲ್ಲ್ಲಿ ಡಬ್ಬಿಗಳಲ್ಲಿ ವಿಷ ಸಂಗ್ರಹಿಸಿ ಬೈಕ್ನಲ್ಲಿ ಸಾಗುತ್ತಿದ್ದ ವೇಳೆ ಇವರನ್ನು ಬಂಧಿಸಲಾಗಿದೆ. ವಿಜ್ಞಾನಿಗಳು ಈ ವಿಷವನ್ನು ವಿಷ ವಿರೋಧಿ ಔಷದಿಅಭಿವೃದ್ಧಿಸಲು ಉಪಯೋಗಿಸುತ್ತಾರೆ ಎಂದು ದತ್ತ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.