ನವದೆಹಲಿ: ದೇಶದ ರೈತರಿಗೆ ಆರ್ಥಿಕ ನೆರವನ್ನು ನೀಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿರುವ ಪಿಎಂ-ಕಿಸಾನ್ ಯೋಜನೆಯಡಿ ಈಗಾಗಲೇ 2.25 ಕೋಟಿ ರೈತರಿಗೆ ಎರಡನೇ ಕಂತಿನ ಹಣವನ್ನು ಹಂಚಿಕೆ ಮಾಡಲಾಗಿದೆ. ತಲಾ 2000 ರೂಪಾಯಿಯಂತೆ ಹಣವನ್ನು ಹಂಚಲಾಗಿದೆ. ಎಪ್ರಿಲ್ 1 ರಿಂದ ಹಣದ ಹಂಚಿಕೆಗೆ ಪ್ರಾರಂಭವನ್ನು ನೀಡಲಾಗಿತ್ತು. ಈ ಯೋಜನೆಯಡಿ ದೇಶದ ಸುಮಾರು 12 ಸಾವಿರ ಕೋಟಿ ರೈತರು ರೂ. 6 ಸಾವಿರವನ್ನು ಕೇಂದ್ರದ ವತಿಯಿಂದ ಪಡೆದುಕೊಳ್ಳಲಿದ್ದಾರೆ.
ಒಂದೊಂದು ಕಂತಿನಲ್ಲಿ ತಲಾ 2000 ರೂಪಾಯಿಯಂತೆ ವಾರ್ಷಿಕ ಮೂರು ಕಂತಿನಲ್ಲಿ ರೂ.6000 ರೂಪಾಯಿಯನ್ನು ರೈತರ ಬ್ಯಾಂಕು ಖಾತೆಗಳಲ್ಲಿ ಜಮಾವಣೆ ಮಾಡಲಾಗುತ್ತದೆ. ಪ್ರಸ್ತುತ 2.25 ಕೋಟಿ ರೈತರು ಎರಡನೇ ಕಂತಿನ ಹಣವನ್ನು ಸ್ವೀಕರಿಸಿದ್ದಾರೆ. ಫಲಾನುಭವಿ ರೈತರ ಪೈಕಿ ಉತ್ತರಪ್ರದೇಶದ ರೈತರ ಸಂಖ್ಯೆಯೇ 1.08 ಕೋಟಿ ಇದೆ.
ಕೊನೆಯ ಮಧ್ಯಂತರ ಬಜೆಟಿನಲ್ಲಿ ಹಂಗಾಮಿ ಹಣಕಾಸು ಸಚಿವರಾಗಿದ್ದ ಪಿಯೂಶ್ ಗೋಯಲ್ ಅವರು ಪಿಎಂ-ಕಿಸಾನ್ ಯೋಜನೆಯನ್ನು ಘೋಷಣೆ ಮಾಡಿದ್ದರು. ಇದಕ್ಕಾಗಿ ರೂ.75,000 ಕೋಟಿಗಳನ್ನು ಎತ್ತಿಟ್ಟಿದ್ದರು.
ಚುನಾವಣೆಗೂ ಮುನ್ನ ಸುಮಾರು 4.76 ಕೋಟಿ ರೈತರ ಪಟ್ಟಿಯನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿತ್ತು, ಇವರಿಗೆ ಈ ಹಣವನ್ನು ಹಂಚಿಕೆ ಮಾಡುವ ಗುರಿಯನ್ನು ಮೋದಿ ಸರ್ಕಾರ ಹೊಂದಿತ್ತು. ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನಲೆಯಲ್ಲಿ ಅಷ್ಟೊಂದು ರೈತರನ್ನು ತಲುಪಲು ಸಾಧ್ಯವಾಗಿಲ್ಲ. ಆದರೂ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ರೈತರನ್ನು ತಲುಪುವಲ್ಲಿ ಯಶಸ್ವಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.