ಹಾವೇರಿ: ರಾಜ್ಯದಲ್ಲಿ ರೈತರಿಗೆ ಬೆಲೆಯೇ ಇಲ್ಲದಂತಾಗಿದೆ, ಸಾಲಬಾಧೆ ತಾಳಲಾರದೆ ದಿನಕ್ಕೊಬ್ಬ ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ಶನಿವಾರವೂ ಹಾವೇರಿಯಲ್ಲಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಕೂರಗುಂದ ಗ್ರಾಮದ 38 ವರ್ಷದ ರೈತ ಜಗದೀಶ್ ಕಿಡೇಗಣ್ಣಿ ಎಂಬುವವರು ವಿಷ ಸೇವೆಸಿ ಇಂದು ಆತ್ಮಹತ್ಯೆ ಮಾಡಿದ್ದಾರೆ, ಇವರು ಬ್ಯಾಂಕುಗಳಲ್ಲಿ ಸುಮಾರು 3 ಲಕ್ಷದವರೆಗೆ ಸಾಲ ಮಾಡಿದ್ದರು ಎಂದು ತಿಳಿದು ಬಂದಿದೆ.
ಕಳೆದ ಗುರುವಾರ ಮಂಡ್ಯದಲ್ಲಿ ರೈತನೊಬ್ಬ ತನ್ನ ಕಬ್ಬಿನ ಗದದೆಗೆ ಬೆಂಕಿ ಕೊಟ್ಟು, ಅದಕ್ಕೆ ತಾನೂ ಹಾರಿ ಬೆಂಕಿಗಾಹುತಿಯಾದ ಧಾರುಣ ಘಟನೆ ನಡೆದಿತ್ತು, ಅದರ ಮರುದಿನವೇ ಮೈಸೂರಿನ ರೈತನೊಬ್ಬ ವಿಷ ಸೇವೆಸಿ ಆತ್ಮಹತ್ಯೆಗೆ ಶರಣಾಗಿದ್ದ, ಇದೀಗ ಇಂದೂ ಒಬ್ಬ ರೈತ ಆತ್ಮಹತ್ಯೆಗೀಡಾಗಿದ್ದಾನೆ.
ಸತತ ಮೂರು ದಿನಗಳಿಂದ ರೈತರು ಆತ್ಮಹತ್ಯೆ ಮಾಡಿಕೊಂಡರೂ ಸರ್ಕಾರ ಮಾತ್ರ ಇನ್ನೂ ಎಚ್ಚೆತ್ತಿಲ್ಲ, ಕಬ್ಬು ಬೆಳಗಾರರ ಬಾಕಿ ಪಾವತಿ ಬಗ್ಗೆ ಇನ್ನೂ ಯಾವ ನಿರ್ಧಾರವನ್ನೂ ಸರ್ಕಾರ ತೆಗೆದುಕೊಂಡಿಲ್ಲ. ಇದು ರೈತ ಸಮುದಾಯವನ್ನು ಆಕ್ರೋಶಕ್ಕೀಡು ಮಾಡಿದೆ. ರಾಜ್ಯಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.