ನವದೆಹಲಿ: ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ)ಯು 2019ರ ಜನವರಿ ಮತ್ತು ಮಾರ್ಚ್ ತಿಂಗಳಲ್ಲಿ ಆಯೋಜನೆಗೊಳಿಸಿದ್ದ ಮೂರು ಕ್ಯಾಂಪಸ್ ಪ್ಲೇಸ್ಮೆಂಟ್ ಅಭಿಯಾನದಲ್ಲಿ 5759 ಹೊಸ ಚಾರ್ಟೆಡ್ ಅಕೌಂಟೆಂಟ್ಸ್ಗಳು ವಿವಿಧ ಕಂಪನಿಗಳಲ್ಲಿ ನೇಮಕಾತಿಗೊಂಡಿದ್ದಾರೆ. ಸರಾಸರಿ ವೇತನ 7.4 ರಿಂದ 8.5 ಲಕ್ಷ ವೇತನದೊಂದಿಗೆ ಇವರು ನೇಮಕಗೊಂಡಿದ್ದಾರೆ ಎಂದು ಕಂಪನಿ ಹೇಳಿದೆ.
“ಸಂಸ್ಥೆ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಅತೀ ಹೆಚ್ಚು ಮಂದಿ ಕ್ಯಾಂಪಸ್ ಪ್ಲೇಸ್ಮೆಂಟ್ ಮೂಲಕ ಉನ್ನತ ಹುದ್ದೆಗಳಿಗೆ ನೇಮಕಗೊಂಡಿದ್ದಾರೆ. ಐಸಿಎಐನಲ್ಲಿನ ಶಿಕ್ಷಣ ಮತ್ತು ತರಬೇತಿಯು, ಹೊಸದಾಗಿ ಅರ್ಹತೆ ಪಡೆದ ಚಾರ್ಟರ್ಡ್ ಅಕೌಂಟೆಂಟ್ ವೃತ್ತಿಪರರು ವಿಮರ್ಶಾತ್ಮಕವಾಗಿರುವುದನ್ನು ಖಚಿತಪಡಿಸುತ್ತದೆ” ಎಂದಿದ್ದಾರೆ.
ಸುಮಾರು 9 ಸಾವಿರ ಸಿಎಗಳು 49ನೇ ಕ್ಯಾಂಪಸ್ ಪ್ಲೇಸ್ ಮೆಂಟ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು, ಅಭ್ಯರ್ಥಿಗಳು 141 ಕಂಪನಿಗಳಿಂದ 3,297 ಆಫರ್ ಗಳನ್ನು ಪಡೆದುಕೊಂಡಿದ್ದರು. ಸಂದರ್ಶನ ನಡೆಸಲು 269 ತಂಡಗಳಿದ್ದವು. ಈ ಕಾರ್ಯದಲ್ಲಿ ನೀಡಲಾದ ಅತೀ ಹೆಚ್ಚು ಆಫರ್ ಎಂದರೆ 22.62 ಲಕ್ಷ ಭಾರತೀಯ ನೇಮಕಾತಿಗಾಗಿ ಮತ್ತು ವಿದೇಶಿ ನೇಮಕಾತಿಗಾಗಿ 35 ಲಕ್ಷ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.