ನವದೆಹಲಿ: ಟಾಟಾ ಸನ್ಸ್ನ ಮಾಜಿ ಮುಖ್ಯಸ್ಥ ರತನ್ ಟಾಟಾ ಅವರು, ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ (ಓಲಾ ಎಲೆಕ್ಟ್ರಿಕ್)ನಲ್ಲಿ ಬಹಿರಂಗಪಡಿಸದ ಮೊತ್ತವನ್ನು ಹೂಡಿಕೆ ಮಾಡಿದ್ದಾರೆ. ಓಲಾದ ಪೋಷಕ ಕಂಪೆನಿ ಆಗಿರುವ ಎಎನ್ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ನಲ್ಲಿ ಟಾಟಾ ಆರಂಭಿಕ ಹೂಡಿಕೆದಾರನಾಗಿತ್ತು.
ರತನ್ ಟಾಟಾ ಅವರ ಆಳವಾದ ಅನುಭವ ಮತ್ತು ಮುಂದಾಳತ್ವ ನಮ್ಮ ಕಂಪನಿಯ ಮಹತ್ವಾಕಾಂಕ್ಷೆಯ ಎಲೆಕ್ಟ್ರಿಕ್ ಮೊಬಿಲಿಟಿಗೆ ಈ ಹೂಡಿಕೆಯಿಂದ ಸಿಗಲಿದೆ ಎಂದು ಓಲಾ ಹೇಳಿದೆ.
“ಟಾಟಾ ಅವರ ಹೂಡಿಕೆಯು, ಚಾರ್ಜಿಂಗ್ ಮೂಲಸೌಕರ್ಯ, ಸ್ವಾಪಿಂಗ್ ಮಾಡೆಲ್, ಮಾರುಕಟ್ಟೆ ಉತ್ಪನ್ನ ಸೇರಿದಂತೆ ಎಲೆಕ್ಟ್ರಿಕ್ ಮೊಬಿಲಿಟಿ ಎಕೋಸಿಸ್ಟಮ್ ಅಭಿವೃದ್ಧಿಪಡಿಸುವ ನಮ್ಮ ಕಂಪನಿಯ ಮಹತ್ವಾಕಾಂಕ್ಷೆಗೆ ಸಿಕ್ಕ ದೊಡ್ಡ ಶ್ಲಾಘನೆಯಾಗಿದೆ. ಈಗಾಗಲೇ ಓಲಾ ಎಲೆಕ್ಟ್ರಿಕ್ ಹಲವಾರು ಕಡೆಗಳಲ್ಲಿ ಪ್ರಾಯೋಗಿಕವಾಗಿ ಚಾರ್ಜಿಂಗ್ ಸೆಲ್ಯೂಷನ್, ಬ್ಯಾಟರಿ ಸ್ವಾಪಿಂಗ್ ಸ್ಟೇಶನ್, ವಾನಹಗಳ ನಿಯೋಜನೆಗಳನ್ನು ನಡೆಸುತ್ತಿದೆ” ಎಂದು ಕಂಪನಿ ಪ್ರಕಟನೆಯಲ್ಲಿ ತಿಳಿಸಿದೆ.
“ಪ್ರತಿನಿತ್ಯ ಎಲೆಕ್ಟ್ರಿಕಲ್ ವೆಹ್ಹಿಕಲ್ ಎಕೋಸಿಸ್ಟಮ್ ವಿಕಸನಗೊಳ್ಳುತ್ತಿದೆ. ಇದರ ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಓಲಾ ಎಲೆಕ್ಟ್ರಿಕ್ ಮಹತ್ವದ ಪಾತ್ರವನ್ನು ವಹಿಸಲಿದೆ ಎಂದು ನಾನು ನಂಬಿದ್ದೇನೆ” ಎಂದು ಟಾಟಾ ಹೇಳಿದ್ದಾರೆ.
ತನ್ನ ಆರಂಭಿಕ ಹೂಡಿಕೆದಾರರಾದ ಟೈಗರ್ ಗ್ಲೋಬಲ್, ಮ್ಯಾಟ್ರಿಕ್ಸ್ ಇಂಡಿಯಾ ಮತ್ತು ಇತರರಿಂದ ಎಲೆಕ್ಟ್ರಿಕ್ ಮೊಬಿಲಿಟಿ ಪ್ರೈ ಲಿಮಿಟೆಡ್ ಸುಮಾರು 400 ಕೋಟಿ ರೂಪಾಯಿಗಳ ಹೂಡಿಕೆಯನ್ನು ಪಡೆದುಕೊಂಡಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.