News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗ್ರೇಟ್ ಖಲಿ, ಬೋನಿ ಕಪೂರ್ ಸೇರಿದಂತೆ ಮೋದಿಗೆ ಸೆಲೆಬ್ರಿಟಿಗಳ ಬೆಂಬಲ

ನವದೆಹಲಿ: ಕಲೆ ಮತ್ತು ಸಿನಿಮಾ ವಿಭಾಗದ ಸೆಲೆಬ್ರಿಟಿಗಳಿಗಾಗಿ ಬಿಜೆಪಿ ಕೇಂದ್ರ ಕಛೇರಿಯಲ್ಲಿ ಭಾನುವಾರ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸಿನಿಮಾ ಇಂಡಸ್ಟ್ರೀ ಸೇರಿದಂತೆ ವಿವಿಧ ವಲಯಗಳ ದಿಗ್ಗಜರುಗಳು ಆಗಮಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಗೆ ತಮ್ಮ ಬೆಂಬಲವನ್ನು ಪ್ರದರ್ಶಿಸಿದರು.

ಖ್ಯಾತ ರೆಸ್ಲರ್ ಗ್ರೇಟ್ ಖಲಿ, ನಿರ್ಮಾಪಕ ಬೋನಿ ಕಪೂರ್, ಕಲಾವಿದೆ ಸಪ್ನಾ ಚೌಧುರಿ, ನಟ ಮನೋಜ್ ಜೋಶಿ, ಎಫ್­ಟಿಐಐನ ಮಾಜಿ ಮುಖ್ಯಸ್ಥ ಗಜೇಂದ್ರ ಚೌವ್ಹಾಣ್ ಮತ್ತು ಪೂನಂ ದಿಲ್ಲಾನ್ ಸೇರಿದಂತೆ ಅಪಾರ ಸೆಲೆಬ್ರಿಟಿಗಳು ಇದರಲ್ಲಿ ಭಾಗಿಯಾಗಿದ್ದರು.

ಇತ್ತೀಚಿಗಷ್ಟೇ ಬಾಲಿವುಡ್ ನಟ ಸನ್ನಿ ಡಿಯೋಲ್ ಅವರು ಬಿಜೆಪಿಗೆ ಸೇರ್ಪಡೆಗೊಂಡು ಗುರುದಾಸ್­ಪುರದಿಂದ ಕಣಕ್ಕಿಳಿದಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗಣಾ ರಣಾವತ್ ಅವರು, ಈಗ ದೇಶ ನಿಜವಾದ ಸ್ವಾತಂತ್ರ್ಯವನ್ನು ಅನುಭವಿಸುತ್ತಿದೆ, ಇಟಲಿ ಸರ್ಕಾರದಿಂದ ಮುಕ್ತಿ ಸಿಕ್ಕಿದೆ ಎಂದು ಹೇಳಿ ಬಿಜೆಪಿಗೆ ಮತ ನೀಡುವಂತೆ ಜನರಿಗೆ ಕೋರಿದ್ದರು. ನಟ ವಿವೇಕ್ ಓಬಿರಾಯ್ ಅವರು ದೆಹಲಿಗರಲ್ಲಿ ಪ್ರಧಾನಿ ಮೋದಿ ಅವರಿಗೆ ಮತ ಹಾಕುವಂತೆ ವಿನಂತಿಸಿಕೊಂಡಿದ್ದಾರೆ.

ಕ್ರಿಕೆಟಿಗ ಗೌತಮ್ ಗಂಭೀರ್ ಅವರೂ ಬಿಜೆಪಿ ಪಕ್ಷದಿಂದ ಚುನಾವಣಾ ಕಣಕ್ಕಿಳಿದಿದ್ದಾರೆ. ಮತ್ತೋರ್ವ ಕ್ರಿಕೆಟಿಗ ರವೀಂದ್ರ ಜಡೇಜಾ ಅವರು ಬಿಜೆಪಿಗೆ ನನ್ನ ಬೆಂಬಲ ಎಂಬುದಾಗಿ ಇತ್ತೀಚಿಗೆ ಘೋಷಣೆ ಮಾಡಿದ್ದರು. ಒಟ್ಟಾರೆಯಾಗಿ ದೇಶದ ಸೆಲೆಬ್ರಿಟಿಗಳು ದೊಡ್ಡ ಮಟ್ಟದಲ್ಲಿ ಮೋದಿಯವರ ಬೆಂಬಲಕ್ಕೆ ನಿಂತಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top