ಮುಂಬೈ : ಅತ್ಯಂತ ಕ್ರಿಯಾಶೀಲ ಎನಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಕೆಲವು ದಿನಗಳಿಂದ ದೇಶದಾದ್ಯಂತ ಮಿಂಚಿನ ಸಂಚಾರವನ್ನು ಮಾಡುತ್ತಿದ್ದಾರೆ. ತಮ್ಮ 125 ದಿನಗಳ ಪಯಣವನ್ನು ಮೋದಿ ತಮ್ಮ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.
125 ದಿನಗಳಲ್ಲಿ 27 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 200 ಕಾರ್ಯಕ್ರಮಗಳನ್ನು ನೆರವೇರಿಸಿರುವ ಅವರು, ದೇಶದ ಪ್ರತಿ ಪ್ರಜೆಗೂ ನಾನು ನಿಮ್ಮೊಂದಿಗೆ ಇದ್ದೇನೆ ಎಂಬ ಭಾವನೆಯನ್ನು ಮೂಡಿಸಿದ್ದಾರೆ.
ಡಿಸೆಂಬರ್ 25ರಿಂದ ಮೇ 1ರ ವರೆಗೆ 125 ದಿನಗಳ ಕಾಲ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಜಮನಗರ್ನಿಂದ ಸಿಲ್ಚಾರ್ ವರೆಗೆ ಭಾರತದ ಮೂಲೆ ಮೂಲೆಯನ್ನೂ ಸುತ್ತಿದ್ದಾರೆ. ವಿದ್ಯಾರ್ಥಿಗಳೊಂದಿಗೆ, ವಿಜ್ಞಾನಿಗಳೊಂದಿಗೆ, ರೈತರೊಂದಿಗೆ, ಉದ್ಯಮಿಗಳೊಂದಿಗೆ, ರಾಜಕೀಯ ಕಾರ್ಯಕರ್ತರೊಂದಿಗೆ, ಅನಿವಾಸಿ ಭಾರತೀಯರೊಂದಿಗೆ, ವಿದೇಶಿ ನಾಯಕರುಗಳೊಂದಿಗೆ ಮಾತುಕತೆಯನ್ನು ನಡೆಸಿದ್ದಾರೆ.
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ಕೊಡದೇ ಇರುವ ಯಾವ ಪ್ರದೇಶವು ಇಲ್ಲ ಎಂದೆನಿಸುತ್ತದೆ.
ನರೇಂದ್ರ ಮೋದಿ ಅವರ ಅಧಿಕೃತ ವೆಬ್ಸೈಟ್ https://www.narendramodi.in/ ನಲ್ಲಿ ಅತ್ಯಂತ ರೋಚಕ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
PM Narendra Modi’s tours and programmes- extensive and exhaustive
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.