ನವದೆಹಲಿ : ಲೇಹ್ ಮತ್ತು ತೋಯ್ಸ್ನಂತಹ ಸವಾಲಿನ ವಾಯುನೆಲೆಗಳಲ್ಲಿ ಯುದ್ಧವಿಮಾನಗಳನ್ನು ಅತ್ಯಂತ ಸುರಕ್ಷಿತವಾಗಿ ಲ್ಯಾಂಡ್ ಮಾಡಿರುವ ಗ್ರೂಪ್ ಕ್ಯಾಪ್ಟನ್ ಸಂದೀಪ್ ಸಿಂಗ್ ಛಬ್ರ ಅವರ ಕಾರ್ಯ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಬುಧವಾರ ಈ ಧೈರ್ಯಶಾಲಿ ಯೋಧ ಈ ಸವಾಲಿನ ವಾಯುನೆಲೆಯಲ್ಲಿ ತಮ್ಮ 1000ನೇ ಲ್ಯಾಂಡಿಂಗ್ ಅನ್ನು ಪೂರ್ಣಗೊಳಿಸಿದರು.
ಸಂದೀಪ್ ಸಿಂಗ್ ಅವರು, 1000 ಬಾರಿ ಯುದ್ಧವಿಮಾನಗಳನ್ನು ಈ ಅತ್ಯಂತ ಕಠಿಣ ವಾಯುನೆಲೆಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಲ್ಯಾಂಡ್ ಮಾಡಿದ್ದಾರೆ. ಅವರ ಈ ಕಾರ್ಯವನ್ನು ವಾಯುಸೇನೆ ಮುಕ್ತ ಕಂಠದಿಂದ ಶ್ಲಾಘಿಸಿದೆ.
#Congratulations : On 30 Apr 2019, Gp Capt SS Chhabra achieved a milestone by executing 1000 incident free landings on IL-76MD aircraft at Leh/Thoise. His contribution has been immense & consistent in supporting the armed forces deployed in the Northern Frontiers.
More on: FB/IAF pic.twitter.com/qIc0GZUveV— Indian Air Force (@IAF_MCC) May 1, 2019
ಲೇಹ್ ಮತ್ತು ತೋಯ್ಸ್ ವಾಯುನೆಲೆ 10 ಸಾವಿರ ಅಡಿ ಎತ್ತರದಲ್ಲಿದ್ದು, ಅತ್ಯಂತ ಕಠಿಣ ಭೂಪ್ರದೇಶದಿಂದ ಆವೃತ್ತವಾಗಿದೆ. ಹೀಗಾಗಿ ಇದು ಜಗತ್ತಿನ ಅತೀ ಕಠಿಣ ವಾಯುನೆಲೆ ಎನಿಸಿಕೊಂಡಿದೆ. ಭಾರದ ಯಂತ್ರೋಪಕರಣಗಳನ್ನು, ಟ್ಯಾಂಕರ್ಗಳ ರಿಫ್ಯೂಲಿಂಗ್ಗೆ ಈ ವಾಯುನೆಲೆಯನ್ನು ಬಳಸಿಕೊಳ್ಳಲಾಗುತ್ತದೆ
ಸಂದೀಪ್ ಸಿಂಗ್ ಅವರು, 8500 ಗಂಟೆಗಳ ಹಾರಾಟ ಅನುಭವವನ್ನು ಹೊಂದಿದ್ದಾರೆ. ಮಾತ್ರಲ್ಲವಲ್ಲದೇ, ಲೇಹ್ ಮತ್ತು ತೋಯ್ಸ್ ವಾಯುನೆಲೆಯಲ್ಲಿ ರಾತ್ರಿ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿರುವ ಕೆಲವೇ ಕೆಲವು ಅಧಿಕಾರಿಗಳಲ್ಲಿ ಒಬ್ಬರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.