ನವದೆಹಲಿ : ಕ್ಷಿಪ್ರವಾಗಿ ಪ್ರಗತಿ ಆಗುತ್ತಿರುವ ಆರ್ಥಿಕತೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯ ಸಹಾಯದೊಂದಿಗೆ ಭಾರತವು ಜಾಗತಿಕ ಮಾರುಕಟ್ಟೆಯಲ್ಲಿ ಮಹತ್ವದ ಸಾಧನೆಯನ್ನು ಮಾಡುತ್ತಿದೆ. ಆ್ಯಪಲ್ ಸಂಸ್ಥೆಯ ಬಳಿಕ ಇದೀಗ ಹಾರ್ಡ್ವೇರ್ ಉತ್ಪಾದನಾ ಸಂಸ್ಥೆ ನೆಟ್ಗೇರ್ ಭಾರತದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಲು ನಿರ್ಧರಿಸಿದೆ .
2020ರ ವೇಳೆಗೆ ಭಾರತದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪನೆ ಮಾಡುವುದಾಗಿ ನೆಟ್ಗೇರ್ ಸಂಸ್ಥೆ ಘೋಷಣೆ ಮಾಡಿದೆ. ಭಾರತದಲ್ಲಿರುವ ಅಗಾಧ ಹೂಡಿಕೆ ಅವಕಾಶಗಳನ್ನು ಬಳಸಿಕೊಳ್ಳಲು ಮತ್ತು ಉತ್ಪಾದನಾ ಘಟಕವನ್ನು ಸ್ಥಾಪಿಸಲು ನಮ್ಮ ಸಂಸ್ಥೆ ನಿರ್ಧರಿಸಿದೆ ಎಂಬುದಾಗಿ ಅದರ ಸಿಇಓ ಪ್ಯಾಟ್ರಿಕ್ ಲೋ ಮಾಹಿತಿಯನ್ನು ನೀಡಿದ್ದಾರೆ.
ಅಮೇರಿಕ ಮತ್ತು ಚೀನಾ ನಡುವೆ ನಡೆಯುತ್ತಿರುವ ವ್ಯಾಪಾರ ಯುದ್ಧದ ಪರಿಣಾಮವಾಗಿ ಚೀನಾದಲ್ಲಿನ ತನ್ನ ಉತ್ಪಾದನಾ ಘಟಕವನ್ನು ಈ ಸಂಸ್ಥೆ ಭಾರತಕ್ಕೆ ಸ್ಥಳಾಂತರ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಈ ಸಂಸ್ಥೆ ಚೀನಾ, ವಿಯೆಟ್ನಾಮ್, ಇಂಡೋನೇಷ್ಯಾ ಮತ್ತು ಥಾಯ್ಲೆಂಡ್ಗಳಲ್ಲಿ ಬಹುಉತ್ಪಾದನಾ ಸ್ಥಳಗಳನ್ನು ಹೊಂದಿದೆ. ಇದೀಗ ಈ ಸಂಸ್ಥೆ ಭಾರತದತ್ತ ಮುಖಮಾಡಿದ್ದು, ಚೀನಾವನ್ನು ಭಾರತದ ಮೂಲಕ ರಿಪ್ಲೇಸ್ ಮಾಡುವ ನಿರ್ಧಾರಕ್ಕೆ ಬಂದಿದೆ.
ಸಂಸ್ಥೆಯು ಇದೀಗ ಭಾರತದಲ್ಲಿ 3rd ಪಾರ್ಟಿ ಪ್ರೊವೈಡರ್ಗಳನ್ನು ಹುಡುಕುತ್ತಿದ್ದು, ಚೆನ್ನೈನ Foxconn ಮುಂತಾದವುಗಳ ಜೊತೆ ಮಾತುಕತೆ ನಡೆಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.