ಬೆಂಗಳೂರು : ಹಿರಿಯ ಚಿತ್ರನಟ ಮತ್ತು ರಾಜ್ಯ ವಸತಿ ಸಚಿವರಾದ ಅಂಬರೀಷ್ ಅವರಿಂದ 1.4ಕೋಟಿ ರೂ ವಸೂಲಿ ಮಾಡುವಂತೆ ಕೋರಿ ಹೈಕೋರ್ಟ್ನಲ್ಲಿ ಪಿಐಎಲ್ ಹಾಕಲಾಗಿದೆ.
ವರ್ಷದ ಹಿಂದೆ ಅಂಬರೀಷ್ ಅವರು ತೀವ್ರ ಅನಾರೋಗ್ಯದಿಂದ ಬಳಲಿದ್ದು ಅವರನ್ನು ಸಿಂಗಾಪುರಕ್ಕೆ ಕಳುಹಿಸಿ ಹೆಚ್ಚಿನ ಚಿಕಿತ್ಸೆಯನ್ನು ನೀಡಲಾಗಿತ್ತು .
ಸಾರ್ವಜನಿಕರ ಹಣವನ್ನು ಈ ರೀತಿ ಖರ್ಚು ಮಾಡಿರುವುದು ಸರಿಯಲ್ಲ. ಅಂಬರೀಷ್ ಅವರ ಸಿಂಗಾಪುರದ ಆಸ್ಪತ್ರೆಯ ಖರ್ಚು 1.4 ಕೋಟಿ ರೂ ಸರಕಾರದ ಬೊಕ್ಕಸದಿಂದ ನೀಡಲಾಗಿತ್ತು.
ಅಂಬರೀಶ್ ಅವರು ತಮ್ಮ ಚಿಕಿತ್ಸೆಗಾದ ಖರ್ಚನ್ನು ತಾವೇ ಭರಿಸಬೇಕು ಸರಕಾರದ ಖರ್ಚು ಮಾಡಿದ ಹಣವನ್ನು ವಾಪಾಸ್ ವಸೂಲಿ ಮಾಡಬೇಕೆಂದು ಪಿಐಎಲ್ ಸಲ್ಲಿಸಲಾಗಿದೆ. ಈ ಅರ್ಜಿ ಇನ್ನು ಕೆಲವೇ ದಿನಗಳಲ್ಲಿ ವಿಚಾರಣೆಗೆ ಬರಲಿದೆ ಎಂದು ತಿಳಿದು ಬಂದಿದೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.