ಕಠ್ಮಂಡು: ಭೂಕಂಪದಿಂದ ತೀವ್ರ ಹಾನಿಗೊಳಗಾಗಿರುವ ನೇಪಾಳವನ್ನು ಪುನರ್ ನಿರ್ಮಾಣ ಮಾಡುವುದಕ್ಕಾಗಿ ಭಾರತ ರೂ.6.357 ಕೋಟಿ ನೆರೆವನ್ನು ಘೋಷಿಸಿದೆ.
ಕಠ್ಮಂಡುವಿನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ದಾನಿಗಳ ಸಮಾವೇಶದಲ್ಲಿ ಗುರುವಾರ ಪಾಲ್ಗೊಂಡ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಈ ನೆರವನ್ನು ಘೋಷಿಸಿದ್ದಾರೆ.
ಬಳಿಕ ಮಾತನಾಡಿದ ಅವರು ‘ಸಂಕಷ್ಟದಲ್ಲಿರುವ ನೇಪಾಳದ ನೆರವಿಗೆ ಭಾರತ ನಿಲ್ಲುತ್ತದೆ, ಭೂಕಂಪದ ವೇಳೆ ‘ಆಪರೇಷನ್ ಮೈತ್ರಿ’ ಆರಂಭವಿಸಿ ನೇಪಾಳಕ್ಕೆ ಸಾಥ್ ನೀಡಿದ್ದೆವು. ಈ ನಾಡಿನ ಪುನರ್ ನಿರ್ಮಾಣಕ್ಕೆ ನಾವು ರೂ.6.357 ಕೋಟಿಯನ್ನು ನೆರವನ್ನು ನೀಡುತ್ತೇವೆ, ಮುಂದೆಯೂ ನೆರವು ನೀಡಲು ಸಿದ್ಧರಾಗಿದ್ದೇವೆ’ ಎಂದರು.
ಈ ಸಮಾವೇಶದಲ್ಲಿ 60ದೇಶಗಳ ಒಟ್ಟು 300 ಪ್ರತಿನಿಧಿಗಳು ಭಾಗವಹಿಸಿದ್ದಾರೆ ಎಮದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.