ವಾಷಿಂಗ್ಟನ್: ಪಾಕಿಸ್ಥಾನಕ್ಕೆ ಇಂಟರ್ನ್ಯಾಷನಲ್ ಮಾನಿಟರಿ ಫಂಡ್ನಿಂದ ಪ್ರಸ್ತಾಪಿತ ಮಲ್ಟಿ-ಬಿಲಿಯನ್ ಬೇಲೌಟ್ ಪ್ಯಾಕೇಜ್ ಅನ್ನು ವಿರೋಧಿಸುವಂತೆ ಮೂರು ಮಂದಿ ಯುಎಸ್ ಸಂಸದರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮನವಿಯನ್ನು ಮಾಡಿಕೊಂಡಿದ್ದಾರೆ. ಈ ಹಣವನ್ನು ಪಾಕಿಸ್ಥಾನ ಚೀನಾದ ಸಾಲ ಮರುಪಾವತಿಗೆ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಯುಎಸ್ ಸಂಸದರಾದ ಯೆಡ್ ಯೊಹೊ, ಅಮಿ ಬೆರ ಮತ್ತು ಜಾರ್ಜ್ ಹೋಲ್ಡಿಂಗ್ ಅವರುಗಳು ಖಜಾನೆ ಕಾರ್ಯದರ್ಶಿ ಸ್ಟೀವನ್ ಮ್ನುಚಿನ್ ಅವರಿಗೆ ಪತ್ರವನ್ನು ಬರೆದು, ಐಎಂಎಫ್ ಪಾಕಿಸ್ಥಾನಕ್ಕೆ ನೀಡುವ ಬೇಲೌಟ್ ಪ್ಯಾಕೇಜ್ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಚೀನಾದಿಂದ ಮಾಡಲಾಗಿರುವ ಅಪಾರ ಪ್ರಮಾಣದ ಸಾಲವನ್ನು ಮರುಪಾವತಿ ಮಾಡಲು ಪಾಕಿಸ್ಥಾನ ಈ ಹಣವನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ.
ಪಾಕಿಸ್ಥಾನದಲ್ಲಿ ಎಕನಾಮಿಕ್ ಕಾರಿಡಾರ್ ಸೇರಿದಂತೆ ಇತರ ಹಲವಾರು ಮೂಲಸೌಕರ್ಯ ಯೋಜನೆಗಳನ್ನು ಚೀನಾ ಕೈಗೊತ್ತಿಕೊಂಡಿದೆ. ಇದರಿಂದಾಗಿ ಪಾಕಿಸ್ಥಾನ ಚೀನಾ ಋಣದಲ್ಲಿ ಬಿದ್ದಿದೆ. ಆ ದೇಶಕ್ಕೆ ಅಪಾರ ಪ್ರಮಾಣದ ಸಾಲವನ್ನು ಮರುಪಾವತಿ ಮಾಡಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಬಿದ್ದಿದೆ.
ಈ ಮೂವರು ಸಂಸದರ ಪ್ರಕಾರ, ಬೀಜಿಂಗ್ ಯುಎಸ್ ಡಿ 62 ಬಿಲಿಯನ್ ಅನ್ನು ಪಾಕಿಸ್ಥಾನದಲ್ಲಿ ಹೂಡಿಕೆ ಮಾಡುತ್ತಿದೆ. ಇದರ ಸಾಲ ಮರುಪಾವತಿ ಮತ್ತು ಲಾಭ ವ್ಯವಸ್ಥೆಗಳು ಪಾರದರ್ಶಕವಾಗಿಲ್ಲ, ಇವುಗಳು ಪಾಕಿಸ್ಥಾನದೊಳಗೇ ಪ್ರಶ್ನೆಗಳು ಹುಟ್ಟುವಂತೆ ಮಾಡಿವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.