ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಪರಿಸರ ಸ್ನೇಹಿ ಮೊಬಿಲಿಟಿ ನೆಟ್ವರ್ಕ್ ಅನ್ನು ನಿರ್ಮಾಣ ಮಾಡುವ ಉದ್ದೇಶದಿಂದ, ಸರ್ಕಾರಿ ಸ್ವಾಮ್ಯದ Gail Gas ಒಂದು ತಿಂಗಳಲ್ಲಿ 12 ಸಿಎನ್ಜಿ (Compressed natural gas) ಸ್ಟೇಶನ್ಗಳನ್ನು ಸ್ಥಾಪನೆ ಮಾಡಿದೆ. ಈಗಾಗಲೇ ಅಲ್ಲಿ 8 ಸಿಎನ್ಜಿ ಸ್ಟೇಶನ್ಗಳಿವೆ. ಈ ಮೂಲಕ ಪ್ರಸ್ತುತ ಬೆಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಸ್ಟೇಶನ್ಗಳ ಸಂಖ್ಯೆ 20ಕ್ಕೆ ಏರಿದೆ.
ಇಷ್ಟ ಮಾತ್ರವಲ್ಲದೇ, 2019-20ರ ಹಣಕಾಸು ವರ್ಷದಲ್ಲಿ, ಇನ್ನೂ 25 ಹೊಸ ಸಿಎನ್ಜಿ ಸ್ಟೇಶನ್ಗಳನ್ನು ನಿರ್ಮಾಣ ಮಾಡಲು ನಿರ್ಧರಿಸಿದೆ. ಇದರಿಂದಾಗಿ ಬೆಂಗಳೂರಿನ ಗ್ರಾಹಕರಿಗೆ ಸಿಎನ್ಜಿ ಸ್ಟೇಶನ್ಗಳ ಲಭ್ಯತೆ ಹೆಚ್ಚಾಗಲಿದೆ.
ಸಿಎನ್ಜಿಯಲ್ಲಿ ಇಂಧನ ಅತ್ಯಂತ ಸುಲಭವಾಗಿ ಸಿಗುವಂತೆ ಮಾಡುವ ನಿಟ್ಟಿನಲ್ಲಿ, ತೈಲ ಮಾರುಕಟ್ಟೆ ಕಂಪನಿಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ ಮತ್ತು ನಗರದಲ್ಲಿನ ಬಿಪಿಸಿಎಲ್, ಐಒಸಿಎಲ್ ಮತ್ತು ಎಚ್ಪಿಸಿಎಲ್ ರಿಟೇಲ್ ಔಟ್ಲೆಟ್ಗಳಲ್ಲಿ ಸಿಎನ್ಜಿ ವಿತರಣೆ ಮಾಡುತ್ತಿದೆ.
ಸಿಎನ್ಜಿ ಆಟೋದ ಸಂಚಾರ ದರ ಪ್ರತಿ ಕಿಲೋಮೀಟರ್ಗೆ ರೂ.1.17, ಎಲ್ಪಿಜಿ ಆಟೋ ದರ ರೂ.2.01 ಆಗಿದೆ. ಇದರಿಂದ ಶೇ.42ರಷ್ಟು ಉಳಿತಾಯವಾಗಲಿದೆ. ಸಿಎನ್ಜಿ ಸ್ಟೇಶನ್ಗಳು ಲಘು ಮತ್ತು ಘನ ವಾಹನಗಳೆರಡನ್ನೂ ನಿರ್ವಹಣೆ ಮಾಡಬಲ್ಲದು ಮತ್ತು ಇದು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ಸ್ವಚ್ಛ ಮತ್ತು ಅನಿಲ ಆಧಾರಿತ ಆರ್ಥಿಕತೆಯನ್ನಾಗಿ ಪರಿವರ್ತಿಸಲು ಅತ್ಯಂತ ಸಕ್ರಿಯ ಉತ್ತೇಜನವನ್ನು ನೀಡುತ್ತಾ ಬಂದಿದ್ದಾರೆ. ಮಾಲಿನ್ಯ ಉಂಟು ಮಾಡುವಂತಹ ಡಿಸೇಲ್ ಮತ್ತು ಪೆಟ್ರೋಲ್ಗಳಿಗೆ ಪರ್ಯಾಯವಾಗಿ ಇದನ್ನು ಬಳಸುವಂತೆ ಉತ್ತೇಜಿಸುತ್ತಿದ್ದಾರೆ. Gailನ ವಿಸ್ತರಣೆ ಈ ನಿಟ್ಟಿನಲ್ಲಿ ಉತ್ತಮ ಹೆಜ್ಜೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.