ನವದೆಹಲಿ: ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್ನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಪ್ಪು ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಅಮೆರಿಕಾ, ಬ್ರಿಟನ್ ಮತ್ತು ಫ್ರಾನ್ಸ್ ಮತ್ತೊಂದು ಸುತ್ತಿನ ಪ್ರಯತ್ನವನ್ನು ಆರಂಭಿಸಿದೆ. ಚೀನಾ ತನ್ನ ವೀಟೋ ಅಧಿಕಾರವನ್ನು ಬಳಸಿ ಈ ಹಿಂದಿನ ಪ್ರಯತ್ನಕ್ಕೆ ಅಡ್ಡಿಪಡಿಸಿದ ಎರಡು ವಾರಗಳ ತರುವಾಯ ಈ ಬೆಳವಣಿಗೆ ನಡೆಸಿದೆ.
ಬ್ರಿಟಿಷ್ ಮತ್ತು ಫ್ರೆಂಚ್ ಬೆಂಬಲವುಳ್ಳ ಪ್ರಸ್ತಾವನೆಯನ್ನು ಅಮೆರಿಕಾ ಸಿದ್ಧಪಡಿಸಿದ್ದು, ಇದನ್ನು 15 ಸದಸ್ಯರ ಮಂಡಳಿಗೆ ಕಳುಹಿಸಿಕೊಡಲಿದೆ. ಮಸೂದ್ ಅಝರ್ಗೆ ಜಾಗತಿಕವಾಗಿ ಶಸ್ತ್ರಾಸ್ತ್ರ ನಿರ್ಬಂಧ, ಪ್ರಯಾಣ ನಿಷೇಧ ಮತ್ತು ಆತನ ಆಸ್ತಿಗಳ ಮುಟ್ಟುಗೋಲು ಪ್ರಸ್ತಾಪ ಇದರಲ್ಲಿದೆ.
ಫೆ. 14 ರಂದು ಪುಲ್ವಾಮದಲ್ಲಿ ಸಿಆರ್ಪಿಎಫ್ ಯೋಧರ ಮೇಲಿನ ದಾಳಿಗೆ ಜೈಶೇ ಸಂಘಟನೆ ಕಾರಣವಾಗಿತ್ತು. ಈ ಘಟನೆಯಲ್ಲಿ ಭಾರತ ತನ್ನ 40 ಯೋಧರನ್ನು ಕಳೆದುಕೊಂಡಿತ್ತು. ಅಲ್ಲದೇ, ಈ ಸಂಘಟನೆ ಹಲವಾರು ಭಯೋತ್ಪಾದನಾ ಕೃತ್ಯಗಳಿಗೆ ಕಾರಣೀಕರ್ತವಾಗಿದೆ.
ಅಮೆರಿಕಾ, ಬ್ರಿಟನ್ ಮತ್ತು ಫ್ರಾನ್ಸ್ ಆರಂಭದಲ್ಲೇ ಭದ್ರತಾ ಮಂಡಳಿಯ ಇಸ್ಲಾಮಿಕ್ ಸ್ಟೇಟ್ ಮತ್ತು ಅಲ್ ಖೈದಾ ನಿರ್ಬಂಧ ಸಮಿತಿಗೆ, ಅಝರ್ನನ್ನು ಭಯೋತ್ಪಾದಕ ಪಟ್ಟಿಗೆ ಸೇರಿಸುವಂತೆ ಮನವಿ ಮಾಡಿತ್ತು. ಆದರೆ ಚೀನಾ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು.
ಇದೀಗ ಮತ್ತೆ ಈ ದೇಶಗಳು ಪ್ರಯತ್ನವನ್ನು ಆರಂಭಿಸಿವೆ, ಆದರೆ ಈ ಬಾರಿ ಯಶಸ್ಸು ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಷ್ಟೇ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.