ನವದೆಹಲಿ: ಪ್ರಸ್ತುತ ಮಲೇಷ್ಯಾದ ಲ್ಯಾಂಗ್ಕವಿ ಇಂಟರ್ನ್ಯಾಷನಲ್ ಮರಿಟೈಮ್ ಆಂಡ್ ಏರೋಸ್ಪೇಸ್ ಎಕ್ಸಿಬಿಷನ್(LIMA-2019)ನಲ್ಲಿ ಭಾರತದ ಹೆಮ್ಮೆಯ ಲಘು ಯುದ್ಧವಿಮಾನಗಳಾದ ತೇಜಸ್ ಭಾಗವಹಿಸಿದ್ದು, ಎಲ್ಲರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಭಿಯಾನಿ ಬಳಗವನ್ನೂ ಸೃಷ್ಟಿಸಿಕೊಂಡಿದೆ.
ಮಂಗಳವಾರ ಆರಂಭವಾದ ಈ ಏರ್ ಶೋನಲ್ಲಿ, ಮೇಡ್ ಇನ್ ಇಂಡಿಯಾ ಫೈಟರ್ ಜೆಟ್ಗಳು ಸ್ಟಾರ್ ಕ್ಯಾಂಪೇನರ್ ಆಗಿ ಹೊರಹೊಮ್ಮಿದೆ. ಮಾರ್ಚ್ 30ರವರೆಗೆ ಈ ಶೋ ಮುಂದುವರೆಯಲಿದೆ. ಹಿಂದೂಸ್ಥಾನ್ ಏರೋನ್ಯಾಟಿಕ್ಸ್ ಲಿಮಿಟೆಡ್ ನಿರ್ಮಿಸಿರುವ ದೇಶೀಯ ಫೈಟರ್ ಜೆಟ್, ಗಂಟೆಗೆ 2,000 ಕಿಮೀ ವೇಗದಲ್ಲಿ ಹಾರುತ್ತದೆ ಮತ್ತು 3000 ಕಿಲೋಮೀಟರ್ ರೇಂಜ್ ಅನ್ನು ಹೊಂದಿದೆ.
ಎರಡು ತೇಜಸ್ ಯುದ್ಧವಿಮಾನಗಳನ್ನು ಕಲೈಕುಂಡಾದಿಂದ ಭಾನುವಾರ ಲ್ಯಾಂಗ್ಕವಿಗೆ ಕೊಂಡೊಯ್ಯಲಾಗಿದೆ. ಕಾರ್ಯಕ್ರಮ ಆರಂಭವಾಗುವುದಕ್ಕೂ ಮುನ್ನ ಇದು ಅಭ್ಯಾಸದಲ್ಲಿ ನಿರತವಾಗಿತ್ತು. ಅತ್ಯಂತ ಲಘು ತೂಕದ ಈ ಯುದ್ಧ ವಿಮಾನ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಈ ಯುದ್ಧವಿಮಾನವನ್ನು ಖರೀದಿಸಲು ಮಲೇಷ್ಯಾ ಸರ್ಕಾರ ಆಸಕ್ತಿಯನ್ನು ತೋರಿಸಿದೆ, ಹೀಗಾಗಿ ಭಾರತೀಯ ವಾಯುಸೇನೆಯು ಮಲೇಷ್ಯನ್ ಏರ್ಫೋರ್ಸ್ ಜೊತೆಗೆ ಮಾತುಕತೆಯಲ್ಲಿ ತೊಡಗಿದೆ. 1991 ರಿಂದ ಆರಂಭಗೊಂಡಿರುವ LIMA ನಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ವಾಯುಪಡೆ ಭಾಗಿಯಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.