ನವದೆಹಲಿ: ಭಾರತವು ಜುಲೈ ವೇಳೆಗೆ ಅಫ್ಘಾನಿಸ್ಥಾನಕ್ಕೆ ನಾಲ್ಕು ಗನ್ಶಿಪ್ ಹೆಲಿಕಾಫ್ಟರ್ಗಳನ್ನು ಪೂರೈಕೆ ಮಾಡುವ ನಿರೀಕ್ಷೆ ಇದೆ. ನಿಗದಿಗಿಂತ ಒಂದು ವರ್ಷ ಮುಂಚಿತವಾಗಿಯೇ ಈ ಹೆಲಿಕಾಫ್ಟರ್ಗಳನ್ನು ಆ ದೇಶಕ್ಕೆ ಪೂರೈಕೆ ಮಾಡಲಾಗುತ್ತಿದೆ.
2018ರ ಹಿಂದೂಸ್ಥಾನ್ ಟೈಮ್ಸ್ ಪ್ರಕಟಿಸಿದ ವರದಿಯ ಪ್ರಕಾರ, ಭಾರತ, ಬೆಲರಸ್ ಮತ್ತು ಅಫ್ಘಾನಿಸ್ಥಾನವು ಮೇಲ್ದರ್ಜೆಗೇರಿಸಿದ ಮಿ-24 ಹೆಲಿಕಾಫ್ಟರ್ಗಳನ್ನು ಪೂರೈಕೆ ಮಾಡುವ ಸಲುವಾಗಿ ತ್ರಿಪಕ್ಷೀಯ ಒಪ್ಪಂದವನ್ನು ಮಾಡಿಕೊಂಡಿತ್ತು. ಬೆಲರಸ್ ಹೆಲಿಕಾಫ್ಟರ್ಗಳನ್ನು ಅಪ್ ಗ್ರೇಡ್ ಮಾಡುತ್ತದೆ, ಇದಕ್ಕೆ ಭಾರತ ಹಣ ಪಾವತಿ ಮಾಡುತ್ತದೆ ಎಂದು ಆಗಿನ ರಾಯಭಾರಿ ಶೈದಾ ಅಬ್ದಾಲಿ ಹೇಳಿದ್ದರು.
‘ಎರಡು ಹೆಲಿಕಾಫ್ಟರ್ಗಳನ್ನು ಎಪ್ರಿಲ್ ತಿಂಗಳಲ್ಲಿ ಪೂರೈಕೆ ಮಾಡುವ ನಿರೀಕ್ಷೆ ಇದೆ. ಇನ್ನು ಎರಡನ್ನು ಜೂನ್ ಅಥವಾ ಜುಲೈ ವೇಳೆಗೆ ಅಫ್ಘಾನಿಸ್ಥಾನಕ್ಕೆ ಹಸ್ತಾಂತರ ಮಾಡುವ ನಿರೀಕ್ಷೆ ಇದೆ’ ಎಂದು ಮೂಲಗಳು ತಿಳಿಸಿವೆ.
ಇದು ಎರಡನೇ ಬಾರಿಗೆ ಭಾರತವು ಲೆಥಾಲ್ ಮಿಲಿಟರಿ ಸಲಕರಣೆಯನ್ನು ಅಫ್ಘಾನಿಸ್ಥಾನಕ್ಕೆ ಪೂರೈಕೆ ಮಾಡುತ್ತಿರುವುದು. ಭಾರತ ನಾಲ್ಕು ಮಿ-24ಗಳನ್ನು ಅಫ್ಘಾನ್ ಶಸ್ತ್ರಾಸ್ತ್ರ ಪಡೆಗಳಿಗೆ 2015-16ರ ಸಾಲಿನಲ್ಲಿ ಪೂರೈಕೆ ಮಾಡಿದೆ. ಅಲ್ಲದೇ, ಅಫ್ಘಾನ್ ಪಡೆಗಳ ಸಾರಿಗೆ ಹೆಲಿಕಾಫ್ಟರ್, ರಷ್ಯಾ ಒರಿಜಿನ್ ಹೆಲಿಕಾಫ್ಟರ್, ಮಿ-24 ಹೆಲಿಕಾಫ್ಟರ್ಗಳನ್ನು ರಿಪೇರಿ ಮಾಡಲು, ಮೇಲ್ದರ್ಜೆಗೆ ಏರಿಸಲು ಭಾರತ ಸಹಾಯ ಮಾಡಲು ನಿರ್ಧರಿಸಿದೆ.
ಕಳೆದ ಜನವರಿಯಲ್ಲಿ ನವದೆಹಲಿಯಲ್ಲಿ ನಡೆದ ಸಭೆಯಲ್ಲಿ, ಅಫ್ಘಾನಿಸ್ಥಾನದ ರಾಷ್ಟ್ರೀಯ ಭದ್ರತಾ ಸಲೆಹೆಗಾರ ಹಂದುಲ್ಲಾಹ ಮೊಹಿಬ್ ಅವರು, ಭಾರತೀಯ ಅಧಿಕಾರಿಗಳೊಂದಿಗೆ ನಾಲ್ಕು ಹೆಚ್ಚುವರಿ ಹೆಲಿಕಾಫ್ಟರ್ ಮತ್ತು ಇತರ ಮಿಲಿಟರಿ ಸಲಕರಣೆಗಳ ಪೂರೈಕೆಯ ಬಗ್ಗೆ ಮಾತುಕತೆಯನ್ನು ನಡೆಸಿದ್ದರು.
2001 ರಿಂದ ತಾಲಿಬಾನ್ ಆಡಳಿತ ನಿರ್ಮೂಲನೆಯಾದ ಬಳಿಕ, ಅಫ್ಘಾನಿಸ್ಥಾನಕ್ಕೆ $3 ಬಿಲಿಯನ್ ಅನುದಾನವನ್ನು ನೀಡಲು ಭಾರತ ಬದ್ಧವಾಗಿದೆ. ಅಲ್ಲದೇ, ಅಫ್ಘಾನ್ ರಾಷ್ಟ್ರೀಯ ಭದ್ರತಾ ಪಡೆಗಳಿಗೆ ಮತ್ತು ಅಫ್ಘಾನ್ ರಾಷ್ಟ್ರೀಯ ಪೊಲೀಸ್ ಪಡೆಗಳಿಗೆ ಭಾರತ ತರಬೇತಿಯನ್ನೂ ನೀಡುತ್ತಿದೆ.
ಅಫ್ಘಾನಿಸ್ಥಾನದಲ್ಲಿ ನಿರಂತರವಾಗಿ ನಡೆಯುತ್ತಿರುವ ಭದ್ರತಾ ಪಡೆ ಮತ್ತು ತಾಲಿಬಾನಿಗಳ ನಡುವಣ ಹೋರಾಟದಲ್ಲಿ, ಭಾರತ ಪೂರೈಕೆ ಮಾಡಲಿರುವ ಹೆಲಿಕಾಫ್ಟರ್ಗಳು ಮಹತ್ವದ ಪಾತ್ರವನ್ನು ವಹಿಸುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.