ನವದೆಹಲಿ: ಅಮೆರಿಕಾದ ನಿರ್ಬಂಧದ ಹಿನ್ನಲೆಯಲ್ಲಿ ವೆನಿಜುವೆಲಾ ತೈಲ ನಷ್ಟವನ್ನು ಸರಿದೂಗಿಸಿಕೊಳ್ಳುವ ಸಲುವಾಗಿ ಭಾರತ, ಬ್ರೆಝಿಲ್ ಮತ್ತು ಮೆಕ್ಸಿಕೋದಿಂದ ತೈಲ ಆಮದನ್ನು ಹೆಚ್ಚಳ ಮಾಡಿಕೊಳ್ಳಲು ನಿರ್ಧರಿಸಿದೆ.
ಸೌದಿ ಅರೇಬಿಯಾ, ಇರಾಕ್, ಇರಾನಿನ ಬಳಿಕ ವೆನಿಜುವೆಲಾ ಭಾರತಕ್ಕೆ ನಾಲ್ಕನೇ ಅತೀದೊಡ್ಡ ತೈಲ ಪೂರೈಕೆದಾರ ರಾಷ್ಟ್ರವಾಗಿದೆ. 2017-18ರ ನಡುವೆ ಭಾರತ ಖರೀದಿ ಮಾಡಿದ ಒಟ್ಟು ತೈಲ ಪ್ರಮಾಣದಲ್ಲಿ ವೆನಿಜುವೆಲಾದ ಪಾಲು ಶೇ.11ರಷ್ಟಿದೆ. 18 ಮಿಲಿಯನ್ ಟನ್ ತೈಲವನ್ನು ಆ ರಾಷ್ಟ್ರ ಪೂರೈಸಿದೆ. ಆದರೆ ಅಮೆರಿಕಾ ನಿರ್ಬಂಧದ ಬಳಿಕ ವೆನಿಜುವೆಲಾದಿಂದ ತೈಲ ಆಮದು ಬೆದರಿಕೆಗೊಳಪಟ್ಟಿದೆ, ಭಾರತೀಯ ಕಂಪನಿಗಳನ್ನು ಪರ್ಯಾಯ ಮಾರ್ಗ ಹುಡುಕುವಂತೆ ಮಾಡಿದೆ.
ಈಗಾಗಲೇ ಈ ಎರಡು ದೇಶಗಳಿಂದ ಭಾರತ ತೈಲ ಖರೀದಿ ಮಾಡುತ್ತಿದೆ. ಆದರೆ 2013ರಿಂದ ಈ ಪ್ರಮಾಣ ಗಣನೀಯವಾಗಿ ಕುಸಿದಿದೆ. ಮೆಕ್ಸಿಕೋದಿಂದ 2013ರಲ್ಲಿ 3.50 ಬಿಲಿಯನ್ ಡಾಲರ್ ಮೊತ್ತದ, ಬ್ರೆಝಿಲ್ನಿಂದ 1.78 ಬಿಲಿಯನ್ ಡಾಲರ್ ಮೊತ್ತದ ತೈಲವನ್ನು ಖರೀದಿ ಮಾಡಿದೆ. ಈಗ ಅದು ಕ್ರಮವಾಗಿ 1.38 ಬಿಲಿಯನ್ ಡಾಲರ್, 0.81 ಬಿಲಿಯನ್ ಡಾಲರಿಗೆ ಕುಸಿತ ಕಂಡಿದೆ.
ಬ್ರೆಝಿಲ್ ಮತ್ತು ಮೆಕ್ಸಿಕೋ ಭಾರತದೊಂದಿಗಿನ ತೈಲ ಬಾಂಧವ್ಯವನ್ನು ವೃದ್ಧಿಸಲು ಹೆಚ್ಚು ಆಸಕ್ತಿಯನ್ನು ತೋರಿಸಿದೆ. ಈ ಆಯ್ಕೆಯನ್ನು ಭಾರತ ಅವಲೋಕನ ಮಾಡುತ್ತಿದೆ. ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಅಭಿಪ್ರಾಯವನ್ನು ಸಂಗ್ರಹಿಸಿದ ಬಳಿಕ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದೆ.
ಮೆಕ್ಸಿಕೋ ಮತ್ತು ಬ್ರೆಝಿಲ್ ಜೊತೆಗೆ ಭಾರತ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿದೆ. ಎರಡೂ ದೇಶಗಳು ಪ್ರಮುಖ ತೈಲ ಉತ್ಪಾದಕ ರಾಷ್ಟ್ರಗಳಾಗಿವೆ. ಬ್ರೆಝಿಲ್ 10ನೇ ಪ್ರಮುಖ ಜಾಗತಿಕ ತೈಲ ಉತ್ಪಾದಕ ದೇಶ, 11ನೇ ಸ್ಥಾನದಲ್ಲಿದೆ ಮೆಕ್ಸಿಕೋ ಇದೆ. ಇವುಗಳು ವೆನಿಜುವೆಲಾಗೆ ಬಲಿಷ್ಠ ಪರ್ಯಾಯ ತೈಲ ಪೂರೈಕೆದಾರ ರಾಷ್ಟ್ರವಾಗಿ ಹೊರಹೊಮ್ಮುವ ನಿರೀಕ್ಷೆ ಇದೆ. ಆದರೆ ಮುಂದಿನ ಗುಣಮಟ್ಟ ಮತ್ತು ಪೂರೈಕೆ ಅವಧಿಯನ್ನು ಅವಲೋಕಿಸಿ ನಿರ್ಧರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.