ವಾಷ್ಟಿಂಗನ್ : ಭಾರತ ವಿಶ್ವದ ಅತ್ಯಂತ ವೇಗದಲ್ಲಿ ಪ್ರಗತಿ ಕಾಣುತ್ತಿರುವ ದೊಡ್ಡ ಆರ್ಥಿಕತೆಗಳಲ್ಲಿ ಒಂದು ಎಂಬುದಾಗಿ ಇಂಟರ್ ನ್ಯಾಷನಲ್ ಮಾನಿಟರಿ ಫಂಡ್ ಹೇಳಿದೆ. ಅಲ್ಲದೇ, ಭಾರತ ಕಳೆದ ಐದು ವರ್ಷಗಳಲ್ಲಿ ಹಲವಾರು ಸುಧಾರಣಾ ಕ್ರಮಗಳನ್ನು ತೆಗೆದುಕೊಂಡಿದೆ, ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಸುಧಾರಣೆಗಳನ್ನು ಮಾಡಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದೆ.
ಕಳೆದ ರಾತ್ರಿ ಪ್ರತಿಕಾಗೋಷ್ಠಿಯನ್ನು ನಡೆಸಿದ್ದ ಐಎಂಎಫ್ ಕಮ್ಯೂನಿಕೇಶನ್ಸ್ ನಿರ್ದೇಶಕ ಗೆರ್ರಿ ರೈಸ್ ಅವರಿಗೆ, ಕಳೆದ ಐದು ವರ್ಷಗಳಲ್ಲಿ ಭಾರತದ ಆರ್ಥಿಕ ಅಭಿವೃದ್ಧಿಗಳ ಬಗ್ಗೆ ಪ್ರಶ್ನೆಯನ್ನು ಕೇಳಲಾಗಿತ್ತು, ಇದಕ್ಕೆ ಉತ್ತರಿಸಿರುವ ಅವರು ‘ಭಾರತ ಖಂಡಿತವಾಗಿಯೂ ಅತಿವೇಗದಲ್ಲಿ ಪ್ರಗತಿಯನ್ನು ಕಾಣುತ್ತಿರುವ ವಿಶ್ವದ ದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಿದೆ. ಕಳೆದ ಐದು ವರ್ಷದಲ್ಲಿ ಭಾರತ ಸರಾಸರಿ ಶೇ.7ರಷ್ಟು ಪ್ರಗತಿ ದರವನ್ನು ಹೊಂದಿದೆ’ ಎಂದಿದ್ದಾರೆ.
ಭಾರತದಲ್ಲಿ ಅತೀ ಮುಖ್ಯ ಆರ್ಥಿಕ ಸುಧಾರಣೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಆದರೆ ಭಾರರತ ತಾನು ಹೊಂದಿರುವ ಜನಸಂಖ್ಯಾ ಡಿವಿಡೆಂಟ್ ಅನ್ನು ಅವಕಾಶವನ್ನಾಗಿ ಸದ್ಭಳಕೆ ಮಾಡಿಕೊಳ್ಳುವುದು ಸೇರಿದಂತೆ ಉನ್ನತ ಪ್ರಗತಿಯನ್ನು ಸ್ಥಿರವಾಗಿಡಲು ಇನ್ನಷ್ಟು ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಮಗನಿಸುತ್ತದೆ’ ಎಂದಿದ್ದಾರೆ.
ಭಾರತೀಯ ಆರ್ಥಿಕತೆಯ ವಿವರಗಳನ್ನು ಮುಂಬರುವ ‘ವರ್ಲ್ಡ್ ಎಕನಾಮಿಕ್ ಔಟ್ ಲುಕ್’ ಸಮೀಕ್ಷೆಯ ವರದಿಯಲ್ಲಿ ನೀಡಲಾಗುವುದು, ಮುಂದಿನ ತಿಂಗಳು ವಿಶ್ವಬ್ಯಾಂಕಿನ ವಾರ್ಷಿಕ ಸಭೆ ನಡೆಯಲಿದ್ದು ಆ ವೇಳೆ ಐಎಂಎಫ್ ವರದಿಯನ್ನು ಬಿಡುಗಡೆ ಮಾಡುತ್ತದೆ ಎಂದಿದ್ದಾರೆ.
ಈಗ ಐಎಂಎಫ್ ನ ಮುಖ್ಯ ಆರ್ಥಿಕತಜ್ಞರಾಗಿರುವ ಭಾರತೀಯ-ಅಮೆರಿಕನ್ ಪ್ರಜೆ ಗೀತಾ ಗೋಪಿನಾಥನ್ ಅವರ ನೇತೃತ್ವದಲ್ಲಿ ಹೊರಬರಲಿರುವ ಮೊದಲ ವರದಿ ಇದಾಗಲಿದೆ.
“‘ವರ್ಲ್ಡ್ ಎಕನಾಮಿಕ್ ಔಟ್ ಲುಕ್ ಹೆಚ್ಚಿನ ವಿವರಗಳನ್ನು ಒದಗಿಸುತ್ತದೆ. ಆದರೆ ನೀತಿ ಆದ್ಯತೆಗಳಲ್ಲಿ, ನಾವು ಬ್ಯಾಂಕುಗಳನ್ನು ಸ್ವಚ್ಛಗೊಳಿಸಲು ಮತ್ತು ಕಾರ್ಪೋರೆಟ್ ಬ್ಯಾಲೆನ್ಸ್ ಶೀಟ್ ಗಳನ್ನು ವೇಗಗೊಳಿಸಲು, ಆರ್ಥಿಕ ಬಲವರ್ಧನೆ ಮುಂದುವರಿಸಲು, ಕೇಂದ್ರ ಮತ್ತು ರಾಜ್ಯ ಮಟ್ಟಗಳಲ್ಲೂ, ಫ್ಯಾಕ್ಟರ್ ಮಾರುಕಟ್ಟೆಗಳಲ್ಲಿ ವಿಶಾಲವಾದ ರಚನಾತ್ಮಕ ಸುಧಾರಣೆಗಳನ್ನು , ಕಾರ್ಮಿಕ, ಭೂ ಸುಧಾರಣೆಗಳನ್ನು ಮತ್ತಷ್ಟು ವೇಗವಾಗಿ ಮತ್ತು ಹೆಚ್ಚು ಅಂತರ್ಗತ ಬೆಳವಣಿಗೆ ಸಾಧಿಸಲು ವ್ಯಾಪಾರದ ವಾತಾವರಣವನ್ನು ಹೆಚ್ಚಿಸುವ ಕಾರ್ಯವನ್ನು ನಾವು ಒಳಪಡಿಸುತ್ತೇವೆ” ಎಂದು ರೈಸ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.