ನವದೆಹಲಿ: ದೇಶದಾದ್ಯಂತ ಹೋಳಿ ಸಂಭ್ರಮ ಮನೆ ಮಾಡಿದೆ. ಬಣ್ಣಗಳ ಹಬ್ಬವನ್ನು ವರ್ಣರಂಜಿತವಾಗಿ ಭಾರತೀಯರು ಆಚರಿಸುತ್ತಿದ್ದಾರೆ. ಗೂಗಲ್ ಕೂಡ ವರ್ಣರಂಜಿತವಾದ ಡೂಡಲ್ ಮೂಲಕ ಹೋಳಿ ಹಬ್ಬವನ್ನು ಸಂಭ್ರಮಿಸಿದೆ. ಮೂರು ದಿನಗಳ ಕಾಲ ಹೋಳಿಯನ್ನು ಸಾಮಾನ್ಯವಾಗಿ ಆಚರಿಸುತ್ತಾರೆ.
ಹೋಳಿ ಹಬ್ಬ ಚಳಿಗಾಲದ ಅಂತ್ಯ ಮತ್ತು ಬೇಸಿಗೆಕಾಲದ ಆರಂಭವನ್ನು ಸಾಂಕೇತಿಸುತ್ತದೆ. ಭಾರತ ಮತ್ತು ನೇಪಾಳದಲ್ಲಿ ಬಹುತೇಕ ಪಾಲು ಜನರು ಈ ಬಣ್ಣಗಳ ಹಬ್ಬವನ್ನು ಆಚರಣೆ ಮಾಡುತ್ತಾರೆ. ಆದರೆ ಈಗ ಹೆಚ್ಚಿನ ಪ್ರಮಾಣದ ಭಾರತೀಯರು ಏಷ್ಯಾ ಮತ್ತು ಪಾಶ್ಚಿಮಾತ್ಯ ದೇಶಗಳಲ್ಲಿ ನೆಲೆಸಿರುವುದರಿಂದ ಅಲ್ಲೂ ಕೂಡ ಹೋಳಿ ಸಂಭ್ರಮ ಹಬ್ಬವಾಗಿ ರೂಪುಗೊಂಡಿದೆ.
ಹೋಳಿಕಾ ದಹನ್ನ ಮುಂಚಿನ ದಿನ ರಾತ್ರಿಯೇ ಹೋಳಿ ಸಂಭ್ರಮ ಗರಿಗೆದರುತ್ತದೆ. ಜನರು ಬೆಂಕಿಯ ಮುಂದೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುತ್ತಾರೆ ಮತ್ತು ದುಷ್ಟ ಶಕ್ತಿಯ ನಾಶಕ್ಕಾಗಿ ಪ್ರಾರ್ಥನೆಯನ್ನು ಮಾಡುತ್ತಾರೆ. ಹೋಳಿಕ, ರಾಕ್ಷಸ ರಾಜ ಹಿರಣ್ಯಕಶುಪುವಿನ ಸಹೋದರಿಯನ್ನು ಇಲ್ಲಿ ಸಾಂಕೇತಿಕವಾಗಿ ಸುಡಲಾಗುತ್ತದೆ. ಕೆಲವೆಡೆ ಇದನ್ನು ಕಾಮದಹನ ಎಂದೂ ಕರೆಯಲಾಗುತ್ತದೆ.
ಹೋಳಿಯ ದಿನ ಜನರು ಪರಸ್ಪರ ಬಣ್ಣಗಳನ್ನು ಹಚ್ಚಿಕೊಂಡು, ಪಿಚ್ಕಾರಿಗಳ ಮೂಲಕ ಬಣ್ಣದ ನೀರಿನ ಬಲೂನ್ಗಳನ್ನು ಎರಚಾಡಿಕೊಂಡು ಸಂಭ್ರಮಿಸುತ್ತಾರೆ. ವಿವಿಧ ಸಂಗೀತಗಳಿಗೆ ಕುಣಿದಾಡುತ್ತಾರೆ. ಒಂದಾಗಿ ಭಾತೃತ್ವವನ್ನು ಪ್ರದರ್ಶಿಸುತ್ತಾರೆ.
ಗೂಗಲ್ ಡೂಡಲ್ನಲ್ಲಿ ಭಾರತೀಯ ಸಾಂಪ್ರದಾಯಿಕ ಉಡುಗೆಯನ್ನು ಉಟ್ಟುಕೊಂಡು ಜನರು ಪರಸ್ಪರ ಬಣ್ಣಗಳನ್ನು ಎರಚುತ್ತಾ, ಡ್ರಮ್ಗಳನ್ನು ಬಾರಿಸುತ್ತಾ ಹಬ್ಬದ ಸಂಭ್ರಮವನ್ನು ಸಾಂಕೇತಿಸಿರುವಂತೆ ವಿನ್ಯಾಸ ಮಾಡಲಾಗಿದೆ. ಸಂಪೂರ್ಣ ಡೂಡಲ್ ವರ್ಣಮಯವಾಗಿ ಗೋಚರಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.