ನವದೆಹಲಿ: ‘ಮೈ ಭೀ ಚೌಕಿದಾರ್’ ಅಭಿಯಾನವನ್ನು ಚುರುಕುಗೊಳಿಸುವ ಸಲುವಾಗಿ, ಮಾರ್ಚ್ 31 ರಂದು ಪ್ರಧಾನಿ ನರೇಂದ್ರ ಮೋದಿಯವರು ಈ ಅಭಿಯಾನಕ್ಕೆ ಬೆಂಬಲ ನೀಡಿರುವ ಜನರೊಂದಿಗೆ ಸಂವಾದವನ್ನು ನಡೆಸಲಿದ್ದಾರೆ. ಈ ಮೂಲಕ ಅಭಿಯಾನವನ್ನು ಇನ್ನಷ್ಟು ಚುರುಕುಗೊಳಿಸಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿರುವ ಬಿಜೆಪಿ ಮುಖಂಡ ಹಾಗೂ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು, ಮೈ ಭೀ ಚೌಕಿದಾರ್ ಅಭಿಯಾನ ಈಗ ಜನರ ಚಳುವಳಿಯಾಗಿ ರೂಪುಗೊಂಡಿದೆ. ಮೈ ಭೀ ಚೌಕಿದಾರ್ ಹ್ಯಾಶ್ ಟ್ಯಾಗ್ ಸುಮಾರು 20 ಲಕ್ಷ ಬಾರಿ ಟ್ವಿಟ್ ಆಗಿದೆ ಮತ್ತು 1680 ಕೋಟಿ ಇಂಪ್ರೆಶನ್ಸ್ ಪಡೆದುಕೊಂಡಿದೆ ಎಂದಿದ್ದಾರೆ.
ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಅವರ ‘ಚೌಕಿದಾರ್ ಚೋರ್ ಹೈ’ ಎಂಬ ಟೀಕೆಗೆ ಪ್ರತ್ಯಸ್ತ್ರವಾಗಿ ಈ ಅಭಿಯಾನವನ್ನು ನಡೆಸಲಾಗುತ್ತಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಆ ರೀತಿ ಏನೂ ಇಲ್ಲ, 2014ರ ಲೋಕಸಭಾ ಚುನಾವಣೆಯ ವೇಳೆಯಲ್ಲೂ ಮೋದಿಯವರು ನಾನು ಮೊದಲು ದೇಶದ ಸೇವಕ ಮತ್ತು ಕಾವಲುಗಾರ ಎಂದಿದ್ದರು ಎಂಬುದನ್ನು ನೆನಪಿಸಿದರು.
ಕಳೆದ ಶನಿವಾರ, ಮೈ ಭೀ ಚೌಕಿದಾರ್ ಎಂಬ ಅಭಿಯಾನವನ್ನು ಆರಂಭಿಸಿದ ಮೋದಿ, ಈ ಪ್ರತಿಜ್ಞೆಯನ್ನು ಕೈಗೊಳ್ಳುವಂತೆ ತಮ್ಮ ಅಭಿಮಾನಿಗಳಿಗೆ ಕರೆ ನೀಡಿದ್ದರು. ಅಲ್ಲದೇ ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ನಾನು ಒಂಟಿ ಅಲ್ಲ ಎಂದು ಹೇಳಿದ್ದರು.
ಮೋದಿಯವರ ಕರೆಯಂತೆ ಹಲವಾರು ಬಿಜೆಪಿ ಮುಖಂಡರು ಮತ್ತು ಮೋದಿ ಬೆಂಬಲಿಗರು ತಮ್ಮ ಟ್ವಿಟರ್ ಹ್ಯಾಂಡಲ್ನಲ್ಲಿನ ಹೆಸರಿನ ಮೊದಲು ಚೌಕಿದಾರ್ ಎಂಬ ಪದವನ್ನು ಸೇರಿಸಿಕೊಂಡಿದ್ದಾರೆ.
ಅಲ್ಲದೇ, ಇಂದು ಅವರು 25 ಲಕ್ಷ ಚೌಕಿದಾರರನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.